Select Your Language

Notifications

webdunia
webdunia
webdunia
webdunia

ಆರೋಗ್ಯಕರ ಸೋಂಪಿನ ಲಾಭಗಳು

ಆರೋಗ್ಯಕರ ಸೋಂಪಿನ ಲಾಭಗಳು
ಬೆಂಗಳೂರು , ಮಂಗಳವಾರ, 11 ಸೆಪ್ಟಂಬರ್ 2018 (15:34 IST)
ಊಟವಾದ ನಂತರ ಸೇವಿಸುವ ಸೋಂಪು ಹಲವಾರು ರೋಗಗಳಿಗೆ ರಾಮಬಾಣವಾಗಿದೆ. ನೋಡಲು ಜೀರಿಗೆಯಂತಿರುವ ಇದನ್ನು ಹಲವಾರು ಕಾಯಿಲೆಗಳ ನಿವಾರಣೆಗೆ ಬಳಸಲಾಗುತ್ತದೆ. ಈ ಸೋಂಪನ್ನು ಪ್ರತಿನಿತ್ಯ ತಿಂದರೆ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. 
- ಸೋಂಪು ಕಾಳನ್ನು ಪ್ರತಿದಿನ ಊಟವಾದ ನಂತರ ಒಂದೆರಡು ಚಮಚ ತಿನ್ನುವುದರಿಂದ ಅಜೀರ್ಣ ನಿವಾರಣೆಯಾಗುತ್ತದೆ. 
 
- ಸೋಂಪು ಕಾಳನ್ನು ಪ್ರತಿದಿನ ಊಟದ ನಂತರ ತಿನ್ನುವುದರಿಂದ ಬಾಯಲ್ಲಿನ ವಾಸನೆ ಕಮ್ಮಿಯಾಗುತ್ತದೆ.
 
- ಹಸ್ತ ಮತ್ತು ಪಾದಗಳು ಅತಿಯಾಗಿ ಬೆವರುವ ಸಮಸ್ಯೆಯಿದ್ದವರು ದಿನನಿತ್ಯ ಊಟದ ನಂತರ ಸೊಂಪಿನ ಕಷಾಯ ಮಾಡಿ ಕುಡಿದರೆ ಅತಿ ಬೆವರು ಕಡಿಮೆಯಾಗುತ್ತದೆ.
 
- ಇದರ ಸೇವನೆಯಿಂದ ಮಕ್ಕಳಲ್ಲಿ ಉಂಟಾಗುವ ಉದರ ತೊಂದರೆಗಳ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.
 
- ಸೋಂಪು ಕಾಳನ್ನು ರಾತ್ರಿ ನೀರಿನಲ್ಲಿ ನೆನೆಸಿ, ಬೆಳಗ್ಗೆ ಅದರ ನೀರಿನಿಂದ ಕಣ್ಣುಗಳನ್ನು ತೊಳೆಯುವುದರಿಂದ ಕಣ್ಣಿನ ಅನೇಕ ತೊಂದರೆಗಳು ನಿವಾರಣೆಗಳಾಗುತ್ತವೆ.
 
- ಬಾಯಿಹುಣ್ಣಿನ ಸಮಸ್ಯೆ ಇರುವವರು ಸೊಂಪನ್ನು ಒಣ ದ್ರಾಕ್ಷಿಯೊಂದಿಗೆ ಬೆರೆಸಿ ಆಗಾಗ ಜಗಿಯುತ್ತಿರಬೇಕು.
 
- ಇದರ ಸೇವನೆಯಿಂದ ದೇಹದಲ್ಲಿರುವ ಕಶ್ಮಲಗಳನ್ನು ಹೋಗಲಾಡಿಸಿ ರಕ್ತವನ್ನು ಶುದ್ಧೀಕರಿಸುತ್ತದೆ.
 
- ಇದನ್ನು ನೀರಿನಲ್ಲಿ ಕುದಿಸಿ, ಸೇವಿಸುವುದರಿಂದ ಮಹಿಳೆಯರಲ್ಲಿ ಮಾಸಿಕ ದಿನಗಳಲ್ಲಿ ಉಂಟಾಗುವ ಹೊಟ್ಟೆನೋವು ಮತ್ತು ಇತರೆ ತೊಂದರೆ ನಿವಾರಣೆಯಾಗುವುದು ಹಾಗೂ ಮುಟ್ಟು ನಿಯಮಿತವಾಗುತ್ತದೆ.
 
- ಇದರ ಸೇವನೆಯಿಂದ ಉರಿಮೂತ್ರ, ಮೂಲವ್ಯಾಧಿ, ಅತಿಸಾರ, ವಾಂತಿ ಮುಂತಾದ ರೋಗಗಳು ನಿವಾರಣೆಯಾಗುತ್ತದೆ.
 
- ಮಲಗುವ ಮುನ್ನ ಸ್ವಲ್ಪ ಸೋಂಪು ತಿಂದು ಮಲಗಿದರೆ ಉತ್ತಮ ನಿದ್ದೆ ಬರುತ್ತದೆ.
 
- ನಿಯಮಿತವಾಗಿ ಆಹಾರದಲ್ಲಿ ಸೋಂಪನ್ನು ಬಳಸುತ್ತಿದ್ದರೆ ಮೆದುಳು ಸ್ವಾಸ್ಥ್ಯಭರಿತವಾಗಿ ಇರುತ್ತದೆ
 
- ಬಾಣಂತಿಯರು ಪ್ರತಿದಿನ 1 ಚಮಚ ಸೋಂಪನ್ನು ವೀಳ್ಯದೆಲೆಯಲ್ಲಿಟ್ಟು ಸೇವಿಸಿದರೆ ಎದೆಹಾಲು ಹೆಚ್ಚುತ್ತದೆ ಹಾಗೂ ಗರ್ಭಕೋಶ ಕಿರಿದಾಗುತ್ತದೆ.
 
- ಇದರ ಸೇವನೆಯಿಂದ ಅಲರ್ಜಿಯಿಂದ ಉಂಟಾಗುವ ಉಸಿರಾಟದ ತೊಂದರೆಗಳು ಮತ್ತು ಕೆಮ್ಮು ಮಾಯವಾಗುತ್ತದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಗಣೇಶ ಚತುರ್ಥಿ ವಿಶೇಷ ಹೋಳಿಗೆ...