Publish Date: Tue, 11 Sep 2018 (09:30 IST)
Updated Date: Tue, 11 Sep 2018 (09:32 IST)
ಬೆಂಗಳೂರು: ಕೆಲಸ ಮಾಡಲು ಅನುಕೂಲವಾಗುತ್ತದೆಂದು ಕೆಲವರು ಲ್ಯಾಪ್ ಟಾಪ್ ನ್ನು ತೊಡೆಯ ಮೇಲಿಟ್ಟುಕೊಂಡು ಕೆಲಸ ಮಾಡುತ್ತಾರೆ. ಆದರೆ ಇದು ಎಷ್ಟು ಅಪಾಯಕಾರಿ ಗೊತ್ತಾ?
ಲ್ಯಾಪ್ ಟಾಪ್ ನ್ನು ಸುದೀರ್ಘ ಕಾಲ ತೊಡೆಯ ಮೇಲಿಟ್ಟುಕೊಂಡು ಕೆಲಸ ಮಾಡುವುದರಿಂದ ಚರ್ಮಕ್ಕೆ ತೊಂದರೆಯಾಗುತ್ತದೆ. ಅಷ್ಟೇ ಅಲ್ಲದೆ, ಲ್ಯಾಪ್ ಟಾಪ್ ನ್ನು ಕಣ್ಣಿಗೆ ನೇರವಾಗಿ ಇಟ್ಟುಕೊಂಡು ಕೆಲಸ ಮಾಡದೇ ಇದ್ದರೆ ದೃಷ್ಟಿ ದೋಷ ಬರುವ ಅಪಾಯವಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಲ್ಯಾಪ್ ಟಾಪ್ ನಂತಹ ವಯರ್ ಲೆಸ್ ಉಪಕರಣಗಳು ಅತೀ ಹೆಚ್ಚು ವಿಕಿರಣಗಳನ್ನು ಹೊರ ಸೂಸುತ್ತವೆ. ಇದು ಫಲವಂತಿಕೆ, ವೀರ್ಯಾಣುಗಳ ಸಂಖ್ಯಾಭಿವೃದ್ಧಿಯನ್ನು ಕುಂಠಿತಗೊಳಿಸುತ್ತವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.