Select Your Language

Notifications

webdunia
webdunia
webdunia
webdunia

ರಕ್ತವನ್ನು ಶುದ್ಧೀಕರಿಸುವ ಆಹಾರ ಪದಾರ್ಥಗಳ ಬಗ್ಗೆ ತಿಳಿದಿದೆಯೇ?

ರಕ್ತವನ್ನು ಶುದ್ಧೀಕರಿಸುವ ಆಹಾರ ಪದಾರ್ಥಗಳ ಬಗ್ಗೆ ತಿಳಿದಿದೆಯೇ?
ಬೆಂಗಳೂರು , ಮಂಗಳವಾರ, 11 ಸೆಪ್ಟಂಬರ್ 2018 (15:44 IST)
ನಮ್ಮ ದೇಹದ ಎಲ್ಲಾ ಕ್ರಿಯೆಗಳು ರಕ್ತ ಪರಿಚಲನೆಯನ್ನು ಅವಲಂಬಿಸಿದೆ. ರಕ್ತದ ಶುದ್ಧೀಕರಣದ ಕೊರತಯಿಂದ ಅಲರ್ಜಿಗಳು, ರೋಗ ನಿರೋಧಕ ಶಕ್ತಿಯ ಕೊರತೆ, ನಿರಂತರವಾದ ತಲೆನೋವು, ಆಯಾಸಗಳು ಮತ್ತು ಚರ್ಮಕ್ಕೆ ಸಂಬಂಧಿಸಿದ ಮೊಡವೆ, ಕಪ್ಪು ಕಲೆಗಳು, ಒಣ ಮತ್ತು ಶುಷ್ಕ ತ್ವಚೆಗಳು ಹೀಗೆ ಹತ್ತು ಹಲವು ಸಮಸ್ಯೆಗಳು ತಲೆದೋರುತ್ತದೆ.

ಈ ಸಮಸ್ಯೆಗಳಿಗೆಲ್ಲ ರಕ್ತ ಶುದ್ಧೀಕಾರಕ ಟಾನಿಕ್ ಮತ್ತು ಔಷಧಗಳು ಮಾರುಕಟ್ಟೆಯಲ್ಲಿ ಸಿಗುತ್ತದೆ. ಆದರೆ ಈ ಔಷಧಿಗಳೆಲ್ಲ ನೂರಕ್ಕೆ ನೂರು ಫಲಿತಾಂಶವನ್ನೇನೂ ನೀಡುವುದಿಲ್ಲ. ಯಕೃತ್ತು, ಮೂತ್ರಪಿಂಡಗಳು, ದುಗ್ದನಾಳಗಳೂ ಸಹ ರಕ್ತವನ್ನು ಶುದ್ಧೀಕರಿಸುವ ಮತ್ತು ದೇಹದಿಂದ ಕಲ್ಮಶ ಮತ್ತು ವಿಷ ಅಂಶಗಳನ್ನು ತೊಲಗಿಸುವ ಕೆಲಸವನ್ನು ಮಾಡುತ್ತದೆ. ಹಾಗೆಯೇ ಕೆಲವು ಆಹಾರ ಪದಾರ್ಥಗಳು ರಕ್ತವನ್ನು ಶುದ್ಧೀಕರಿಸುವ ಕೆಲಸವನ್ನು ಮಾಡುತ್ತವೆ. ಅಂತಹ ಆಹಾರಗಳು ಯಾವುವು ಎಂದು ನೋಡೋಣ..
 
* ಹಾಗಲಕಾಯಿ : ಹಾಗಲಕಾಯಿಯು ಕಹಿಯಾಗಿದ್ದರೂ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದು ರಕ್ತವನ್ನು ಶುದ್ದೀಕರಿಸುವ ಒಂದು ಉತ್ತಮ ತರಕಾರಿಯಾಗಿದೆ.
 
* ಬ್ರೊಕ್ಲಿ : ಈ ಹಸಿರು ತರಕಾರಿಯು ಆಂಟಿ ಆಕ್ಸಿಡೆಂಟ್‌ಗಳನ್ನು ಒಳಗೊಂಡಿದೆ. ಈ ಅಂಶವು ರಕ್ತವನ್ನು ಶುದ್ಧಗೊಳಿಸಿ ಆರೋಗ್ಯಕ್ಕೆ ಹಾನಿ ಉಂಟುಮಾಡುವ ಕಲ್ಮಶ ಮತ್ತು ವಿಷ ಅಂಶಗಳನ್ನು ದೇಹದಿಂದ ತೆಗೆದುಹಾಕುತ್ತದೆ.
 
* ಕೋಸುಗಡ್ಡೆ ಮತ್ತು ಹೂಕೋಸು : ಇವುಗಳಲ್ಲಿರುವ ಕ್ಲೊರೊಫಿಲ್ ಅಂಶವು ರಕ್ತದಲ್ಲಿರುವ ಕಲ್ಮಶಗಳನ್ನು ತೆಗೆಯುವುದಲ್ಲದೇ ರಕ್ತವನ್ನು ಶುದ್ಧಗೊಳಿಸುತ್ತದೆ.
 
* ಬೇವು : ಬೇವು ಕೂಡಾ ಬಹಳ ಕಹಿ ಅಂಶವಿರುವ ತರಕಾರಿ. ಇದರ ಎಲೆಗಳನ್ನು ನೀರಿನಲ್ಲಿ ಕುದಿಸಿ ಬೆಳಿಗ್ಗೆ ಸೇವಿಸುವುದರಿಂದ ಇದು ಬಲವಾಗಿ ಮತ್ತು ನೈಸರ್ಗಿಕವಾಗಿ ರಕ್ತ ಶುದ್ಧೀಕಾರಕವಾಗಿ ಕೆಲಸ ಮಾಡುತ್ತದೆ.
 
* ಅನಾನಸ್ ಹಣ್ಣು : ರಕ್ತ ಶುದ್ಧೀಕರಿಸುವ ಆಹಾರ ಪದಾರ್ಥಗಳಲ್ಲಿ ಅನಾನಸ್ ಕೂಡಾ ಒಂದು. ಈ ಹಣ್ಣು ರಕ್ತ ಮತ್ತು ಮೂತ್ರಪಿಂಡವನ್ನು ಶುದ್ಧಗೊಳಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ.
 
* ಗ್ರೀನ್ ಟೀ : ಮೂಲಿಕೆಗಳ ಈ ಟೀ ಅನ್ನು ದಿನಕ್ಕೆ ಒಂದು ಬಾರಿ ರಕ್ತದ ಶುದ್ಧೀಕರಣಕ್ಕಾಗಿ ಸೇವಿಸಬಹುದು. 
 
* ಪಾರ್ಸ್ಲೆ : ಇವು ಮೂತ್ರಪಿಂಡಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಇವುಗಳು ಮೂತ್ರಪಿಂಡಗಳನ್ನು ಶುದ್ಧಗೊಳಿಸಿ ನಿರ್ವಿಷಗೊಳಿಸುವುದರಿಂದ ಇವುಗಳನ್ನು ರಕ್ತ ಶುದ್ಧೀಕರಿಸಲು ಒಂದು ಪರಿಹಾರವಾಗಿ ಬಳಸಲಾಗುತ್ತದೆ. 
 
* ಜೇನುತುಪ್ಪ : ಹಲವಾರು ಆಯುರ್ವೇದದ ಚಿಕಿತ್ಸಕವಾಗಿರುವ ಇದು ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು ಉತ್ತಮ ರಕ್ತ ಶುದ್ಧೀಕಾರಕವಾಗಿ ಕೆಲಸ ಮಾಡುತ್ತದೆ.
 
* ಬೆಳ್ಳುಳ್ಳಿ : ಬೆಳ್ಳುಳ್ಳಿಯು ಕೇವಲ ಒಂದು ಆಂಟಿ ಬಯೋಟಿಕ್ (ಪ್ರತಿಜೀವಕ) ಮಾತ್ರವಲ್ಲ, ಇದು ಒಂದು ರಕ್ತ ಶುದ್ಧೀಕರಣದ ಮೂಲಿಕೆ. ಬೆಳ್ಳುಳ್ಳಿಯು ದೇಹದಲ್ಲಿನ ಸ್ವತಂತ್ರ ರಾಡಿಕಲ್‌ಗಳನ್ನು ಹೊರಹಾಕುತ್ತದೆ ಮತ್ತು ರಕ್ತದಲ್ಲಿನ ಕೊಬ್ಬಿನ ಅಂಶವನ್ನೂ ಸಹ ಕಡಿಮೆ ಮಾಡುತ್ತದೆ.
 
* ಕ್ಯಾರೆಟ್ : ಕ್ಯಾರೆಟ್ ತ್ವಚೆಯ ಆರೋಗ್ಯಕ್ಕೆ ಒಂದು ಉತ್ತಮ ಆಹಾರವಾಗಿದೆ. ದಿನ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಕ್ಯಾರೆಟ್ ಜ್ಯೂಸ್‌ನ ಸೇವನೆಯು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ರಕ್ತವನ್ನು ಶುದ್ಧೀಕರಿಸುವಲ್ಲಿ ಸಹಾಯಕಾರಿಯಾಗಿದೆ ಅದಲ್ಲದೇ ತ್ವಚೆಗೆ ತೊಂದರೆಯುಂಟು ಮಾಡುವ ಹಾನಿಕಾರಕ ವಿಷ ಅಂಶಗಳನ್ನು ಮತ್ತು ಸ್ವತಂತ್ರ ರಾಡಿಕಲ್‌ಗಳನ್ನು ತೊಲಗಿಸುತ್ತದೆ.
 
* ಕಲ್ಲಂಗಡಿ : ಕಲ್ಲಂಗಡಿಯು ರಕ್ತವನ್ನು ಶುದ್ಧಗೊಳಿಸುವುದಲ್ಲದೇ ರಕ್ತದಲ್ಲಿನ ಸಕ್ಕರೆ ಮಟ್ಟವನ್ನೂ ಸಹ ಕಾಯ್ದುಕೊಳ್ಳುತ್ತದೆ. ಅಷ್ಟೇ ಅಲ್ಲದೇ ತೂಕ ನಿರ್ವಹಣೆಗೂ ಸಹಕಾರಿಯಾಗಿದೆ.
 
ರಕ್ತದ ಶುದ್ಧೀಕರಣವು ಆಗಾಗ್ಗೆ ಆಗುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ನಾವು ತಡೆಯಬಹುದು. ಇಂತಹ ಆಹಾರ ಪದಾರ್ಥಗಳನ್ನು ನಾವು ಬಳಸುವುದರಿಂದ ನಮ್ಮ ದೇಹದಲ್ಲಿ ಶುದ್ಧವಾದ ರಕ್ತದ ಪೂರೈಕೆ ಸಾಧ್ಯವಾಗುತ್ತದೆ. ಆದರೆ ಯಾವುದನ್ನೂ ನಿರ್ಲಕ್ಷಿಸದೇ ವೈದ್ಯರ ಸಲಹೆಯನ್ನೂ ತೆಗೆದುಕೊಳ್ಳುವುದೂ ಸಹ ಮುಖ್ಯವಾಗುತ್ತದೆ. ರೋಗದ ಲಕ್ಷಣಗಳು ಕಂಡುಬಂದಾಗಲೇ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆಯ ಮೇರೆಗೆ ಔಷಧಿಗಳನ್ನು ತೆಗೆದುಕೊಳ್ಳುವುದು ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಉಪ್ಪಿನಕಾಯಿಯಿಂದ ಬಾಯಲ್ಲಿ ನೀರು ಬರುವುದೊಂದೇ ಅಲ್ಲ, ಕಣ್ಣಿನಿಂದಲೂ ನೀರು ?