Select Your Language

Notifications

webdunia
webdunia
webdunia
webdunia

ಈ ಬಾರಿ ಪ್ರಧಾನಮಂತ್ರಿ ಬಾಲಪುರಸ್ಕಾರ ಪ್ರಶಸ್ತಿ ಯಾರಿಗೆ?

ಈ ಬಾರಿ ಪ್ರಧಾನಮಂತ್ರಿ ಬಾಲಪುರಸ್ಕಾರ ಪ್ರಶಸ್ತಿ ಯಾರಿಗೆ?
ಬೆಂಗಳೂರು , ಸೋಮವಾರ, 24 ಜನವರಿ 2022 (09:02 IST)
ಬೆಂಗಳೂರು : ಪ್ರತಿಷ್ಠಿತ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರಕಟವಾಗಿದ್ದು, ಬೆಂಗಳೂರಿನ ಸೈಯದ್ ಫತೀನ್ ಅಹ್ಮದ್ಗೆ ಪ್ರಶಸ್ತಿ ಲಭಿಸಿದೆ.
ಕೇಂದ್ರ ಸರ್ಕಾರ ಪ್ರಕಟಿಸಿದ 29 ಬಾಲಕರ ಪೈಕಿ ಬೆಂಗಳೂರಿನ ಸೈಯದ್ ಫತೀನ್ ಅಹ್ಮದ್ ಆಯ್ಕೆ ಆಗಿದ್ದಾನೆ. ಸಂಗೀತ-ಮನರಂಜನೆ ವಿಭಾಗದಲ್ಲಿ ಫತೀನ್ಗೆ ಪ್ರಶಸ್ತಿ ಸಿಕ್ಕಿದೆ.

ಪಿಯಾನೋದಲ್ಲಿ 16 ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಫತೀನ್ ಪಡೆದಿದ್ದು, ಪ್ರಶಸ್ತಿ ಪುರಸ್ಕೃತ ಮಕ್ಕಳ ಜೊತೆ ಪ್ರಧಾನಿ ಮೋದಿ ಇಂದು ಮಧ್ಯಾಹ್ನ ವೀಡಿಯೋ ಸಂವಾದ ನಡೆಸಲಿದ್ದಾರೆ. ಫತೀನ್ ಜಯನಗರ ನಿವಾಸಿ ವೈದ್ಯೆ ಡಾ.ಅಸ್ಮಾ ರವರ ಪುತ್ರನಾಗಿದ್ದಾನೆ. 

5 ವರ್ಷಕ್ಕಿಂತ ಮೇಲ್ಪಟ್ಟ 18 ವರ್ಷ ಮೀರಿರದ ಬಾಲಕರು ಮತ್ತು ಪ್ರೌಢಾವಸ್ಥೆಯಲ್ಲಿರುವವರ ಅಸಾಧಾರಣ ಸಾಧನೆ ಗುರುತಿಸಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ನೀಡಲಾಗುತ್ತದೆ. ನಾವೀನ್ಯತೆ, ಸಮಾಜ ಸೇವೆ, ಪಾಂಡಿತ್ಯ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ ಮತ್ತು ಶೌರ್ಯ ಎಂಬ ಆರು ವಿಭಾಗಗಳಲ್ಲಿ ಅಸಾಧಾರಣ ಸಾಧನೆಗಾಗಿ ಪ್ರಶಸ್ತಿ ನೀಡಲಾಗುತ್ತದೆ.

ಪ್ರಶಸ್ತಿ 1 ಲಕ್ಷ ರೂ. ನಗದು ನಗದು ಬಹುಮಾನ, ಪದಕ ಮತ್ತು ಪ್ರಮಾಣಪತ್ರ ಒಳಗೊಂಡಿರುತ್ತದೆ. ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿಗಳು ಪ್ರಶಸ್ತಿಯನ್ನು ಪ್ರದಾನ ಮಾಡುತ್ತಾರೆ.

ಪ್ರಧಾನಮಂತ್ರಿ ಅವರು ಪ್ರತಿ ವರ್ಷ ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ ನಡೆಸುತ್ತಾರೆ. ಜನವರಿ 24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಸಂದರ್ಭದಲ್ಲಿ ಮತ್ತು ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಪ್ರಧಾನಮಂತ್ರಿಯವರು 2022ನೇ ಸಾಲಿನ ಬಾಲ ಪುರಸ್ಕಾರ ಪಡೆದವರೊಂದಿಗೆ ಸಂವಾದ ನಡೆಸಲಿದ್ದಾರೆ. ಪ್ರಶಸ್ತಿ ವಿಜೇತರು ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಲಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಸ್ನೇಹಿತನ ಜೊತೆಗೆ ಹೆಂಡ್ತಿ ಅಕ್ರಮ ಸಂಬಂಧದ ಅನುಮಾನ: ಕೊಲೆಯಲ್ಲಿ ಅಂತ್ಯ