Select Your Language

Notifications

webdunia
webdunia
webdunia
webdunia

ವಿಜಯಪುರ ‌ನಗರ‌ ಮತಕ್ಷೇತ್ರ ಅತಿ‌ ಸೂಕ್ಷ್ಮ: ಯಾತ್ನಾಳ್ ‌

ವಿಜಯಪುರ ‌ನಗರ‌ ಮತಕ್ಷೇತ್ರ ಅತಿ‌ ಸೂಕ್ಷ್ಮ: ಯಾತ್ನಾಳ್ ‌
ವಿಜಯಪುರ , ಗುರುವಾರ, 10 ಮೇ 2018 (13:43 IST)
ವಿಜಯಪುರ. ವಿಜಯಪುರ ‌ನಗರ‌ ಮತಕ್ಷೇತ್ರವನ್ನು ಅತಿ‌ ಸೂಕ್ಷ್ಮ ‌ಮತಕ್ಷೇತ್ರ ಎಂದು ಘೋಷಣೆ ಮಾಡುವಂತೆ ಮನವಿ‌ ಮಾಡಿದ್ದೇವೆ.
ಮತಗಟ್ಟೆಯಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಮನವಿ‌‌ ಮಾಡಿದ್ದೇವೆ. ನಮ್ಮ ಮನವಿಗೆ ಅಧಿಕಾರಿಗಳು‌ ಸ್ಪಂಧಿಸುವ ಭರವಸೆ ನೀಡಿದ್ದು, ಹೆಚ್ಚಿನ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ ನೀಡಿದ್ದಾರೆ
ಕಾಂಗ್ರೆಸ್ ಅಭ್ಯರ್ಥಿ ಜೊತೆ ಗುಂಡಾಗಳು ಸುತ್ತುತ್ತಿದ್ದಾರೆ.ಗುಂಡಾಗಳನ್ನು ಗಡಿಪಾರು ಮಾಡುವಂತೆ ಐಜಿಪಿಯವರಿಗೆ ಮನವಿ ಮಾಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.ಸಂಜಯ್ ನಗರ ಹಾಗೂ ಕೋರ್ಟ್ ಬಳಿ ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡಲಾಗಿದೆ.ಇದನ್ನ ಐಜಿಪಿ ಗಮನಕ್ಕೆ ತರಲಾಗಿದೆ. 
 
ಅಧಿಕಾರಿಗಳು ಚುನಾವಣೆ ವೇಳೆ ನಡೆಯುವ ಘಟನೆಗಳ ಬಗ್ಗೆ ಮಾಹಿತಿ‌ ನೀಡದಿದ್ದರೆ ಅಮಾನತು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
 
ದೂರವಾಣಿ ಮೂಲಕ ಐಜಿಪಿಯವರು ಎಸ್ ಪಿ ಗೆ ಸೂಚನೆ ನೀಡಿದ್ದಾರೆ.ನಾನು‌ ವಿಜಯಪುರ ಅಭಿವೃದ್ದಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತೇನೆ ಎಂದರು.
 
ವಿಜಯಪುರ ನಗರ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ.ನಾನು ಮುಸ್ಲಿಮರ ಓಟ್ ಬೇಡ ಅಂತಾ ಎಂದೂ ಹೇಳಿಲ್ಲ.
ದೇಶದ್ರೋಹಿಗಳ ಮತಬೇಡ ಎಂದು ಹೇಳಿದ್ದೇನೆ. ಪಾಕಿಸ್ತಾನ‌ ಪರವಾಗಿರುವವರ ಮತ ಬೇಡ ಎಂದು ಹೇಳಿದ್ದೇನೆ.ಸಾಮಾಜಿಕ‌ ಜಾಲತಾಣದಲ್ಲಿ ಯಾರೋ ಅದನ್ನು ತಿರುಚಿದ್ದಾರೆ.ಮುಸ್ಲಿಂ ಮಹಿಳೆಯರು ಮೋದಿ ಪರವಾಗಿ ಒಲವು ಹೊಂದಿದ್ದಾರೆ ಎಂದರು.
 
ತ್ರಿಪಲ್ ತಲಾಖ್ ವಿಚಾರದಲ್ಲಿ ಮೋದಿ ಐತಿಹಾಸಿಕ ನಿರ್ಣಾಯಕ ಕೈಗೊಂಡಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ ತಿಳಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬೀದರ್‌ನಲ್ಲಿ ಪಾರದರ್ಶಕ ಚುನಾವಣೆ ನಡೆಯೋದು ಅನುಮಾನ: ಖೂಬಾ