Publish Date: Thu, 10 May 2018 (09:57 IST)
Updated Date: Thu, 10 May 2018 (09:59 IST)
ನವದೆಹಲಿ: 2019 ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಬಹುಮತ ಪಡೆದರೆ ಪ್ರಧಾನಿಯಾಗುವುದಾಗಿ ಹೇಳಿರುವ ರಾಹುಲ್ ಗಾಂಧಿಗೆ ಬಿಜೆಪಿ ಟಾಂಗ್ ನೀಡಿದೆ.
‘ರಾಹುಲ್ ಜೀ ಹಗಲುಗನಸು ಕಾಣಬೇಡಿ. 2024 ರವರೆಗೂ ಪ್ರಧಾನಿ ಸೀಟು ಖಾಲಿ ಇಲ್ಲ’ ಎಂದು ಬಿಜೆಪಿ ಹಿರಿಯ ನಾಯಕ ಶಹನಾವಾಜ್ ಹುಸೈನ್ ಲೇವಡಿ ಮಾಡಿದ್ದಾರೆ.
‘ರಾಹುಲ್ ತಾವು 2019 ರಲ್ಲಿ ಪ್ರಧಾನಿಯಾಗುತ್ತೇವೆಂದು ಕನಸು ಕಾಣುತ್ತಿದ್ದಾರೆ. ಅವರ ಹಗಲುಗನಸಿಗೆ ಅಭಿನಂದನೆಗಳು. ಆದರೆ 2024 ರವರೆಗೆ ಪ್ರಧಾನಿ ಖುರ್ಚಿ ಖಾಲಿ ಇಲ್ಲ. 2019 ರಲ್ಲಿ ನರೇಂದ್ರ ಮೋದಿಯವರೇ ಗೆದ್ದು ಮತ್ತೆ ಪ್ರಧಾನಿಯಾಗಲಿದ್ದಾರೆ. ಅದು ರಾಹುಲ್ ಗೂ ಗೊತ್ತು’ ಎಂದು ಹುಸೈನ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.