Publish Date: Thu, 10 May 2018 (08:08 IST)
Updated Date: Thu, 10 May 2018 (08:09 IST)
ನವದೆಹಲಿ: 2019 ರ ಚುನಾವಣೆಯಲ್ಲಿ ತಾವು ಪ್ರಧಾನಿಯಾಗುವುದಾಗಿ ಹೇಳಿಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ.
‘ರಾಹುಲ್ ಗಾಂಧಿಗೆ ಪ್ರಧಾನಿ ಕುರ್ಚಿ ಮೇಲೆ ಕಣ್ಣು ಬಿದ್ದಿದೆ. ಅವರ ಕನಸು ಅದೊಂದೇ. ಒಬ್ಬ ವ್ಯಕ್ತಿ ತನ್ನಷ್ಟಕ್ಕೇ ತಾನೇ ಮುಂದಿನ ಪ್ರಧಾನಿಯಾಗುತ್ತೇನೆ ಎಂದುಕೊಳ್ಳಲು ಹೇಗೆ ಸಾಧ್ಯ? ಇದು ಅವರ ದರ್ಪ ಎಷ್ಟಿದೆ ಎಂದು ತೋರಿಸುತ್ತದೆ’ ಎಂದು ಮೋದಿ ಬಿಜೆಪಿ ಸಮಾವೇಶದಲ್ಲಿ ವ್ಯಂಗ್ಯವಾಡಿದ್ದಾರೆ.
ರಾಹುಲ್ ಮುಂಬರುವ ಲೋಕಸಭೆಯಲ್ಲಿ ತಮ್ಮ ಪಕ್ಷ ಗೆದ್ದರೆ ಪ್ರಧಾನಿಯಾಗುವುದಾಗಿ ಹೇಳಿಕೆ ನೀಡಿದ್ದರು. ಆ ಸಂದರ್ಭದಲ್ಲಿ ಮೋದಿಯಂತೂ ಮುಂದೆ ಪ್ರಧಾನಿಯಾಗಲ್ಲ ಎಂದಿದ್ದರು. ಇದಕ್ಕೂ ತಿರುಗೇಟು ನೀಡಿರುವ ಪ್ರಧಾನಿ ಮೋದಿ ಕಾಂಗ್ರೆಸ್ ನವರಿಗೆ ನನ್ನನ್ನು ಟಾರ್ಗೆಟ್ ಮಾಡುವುದನ್ನು ಬಿಟ್ಟು ಬೇರೆ ಕೆಲಸವಿಲ್ಲವೇ? ಎಂದು ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.