Publish Date: Thu, 10 May 2018 (08:11 IST)
Updated Date: Thu, 10 May 2018 (08:12 IST)
ಬೆಂಗಳೂರು: ಮೇ 15 ರ ನಂತರ ಕೆಜೆ ಜಾರ್ಜ್, ರೋಷನ್ ಬೇಗ್, ಹ್ಯಾರಿಸ್ ಮುಕ್ತ ಬೆಂಗಳೂರು ಆಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ನ ಈ ಎಲ್ಲಾ ಶಾಸಕರಿಗೆ ಜನರು ಮನೆ ದಾರಿ ತೋರಿಸಲಿದ್ದಾರೆ ಎಂದು ಅವರು ಲೇವಡಿ ಮಾಡಿದ್ದಾರೆ.
ಈ ಚುನಾವಣೆ ಮುಗಿದ ಬಳಿಕ ಸಿದ್ದರಾಮಯ್ಯ ಕೂಡಾ ಮನೆಗೆ ಹೋಗಬೇಕಾಗುತ್ತದೆ. ಬೆಂಗಳೂರನ್ನು ಹಾಳು ಮಾಡಿರುವ ಬೇಗ್, ಜಾರ್ಜ್, ಹ್ಯಾರಿಸ್ ರನ್ನು ಜನರೇ ಮನೆಗೆ ಕಳುಹಿಸುತ್ತಾರೆ. ಬಿಜೆಪಿ ನೇತೃತ್ವದಲ್ಲಿ ಸ್ವಚ್ಛ್ ಬೆಂಗಳೂರು ಸ್ಥಾಪನೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.