Publish Date: Wed, 09 May 2018 (18:32 IST)
Updated Date: Wed, 09 May 2018 (18:33 IST)
ನಿನ್ನೆ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಹಣದ ಹೊಳೆ ಹರಿದಿದ್ದು ಹಾವೇರಿ ಜಿಲ್ಲೆಯ ಸವಣೂರು ಮತ್ತು ಬ್ಯಾಡಗಿ ಪಟ್ಟಣದಲ್ಲಿ ಬಿಜೆಪಿ ಮುಖಂಡರು. ಹಣ ಹಂಚಿಕೆ ಮಾಡಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ.
ಶಿಗ್ಗಾವಿ ಬಿಜೆಪಿ ಅಬ್ಯರ್ಥಿ ಬಸವರಾಜ್ ಬೊಮ್ಮಾಯಿ ಪ್ರಚಾರಕ್ಕೆ ಹಣದ ಆಮಿಷ ಒಡ್ಡಿ ಜನರನ್ನು ಕರೆ ತಂದ ಕಾರ್ಯಕರ್ತರು..ಕಾರ್ಯಕ್ರಮದ ಬಳಿಕ ಲಿಸ್ಟ್ ನೋಡಿ ಸಭೆಗೆ ಬಂದಿದ್ದ ಜನರಿಗೆ ಬಿಜೆಪಿ ಮುಖಂಡರು ಹಣ ಹಂಚಿಕೆ ಮಾಡಿದ್ದಾರೆ.
ಅತ್ತ ಬ್ಯಾಡಗಿಯ ದುರ್ಗಾದೇವಿ ಗುಡಿ ಬಳಿಯ ಕಾಲೇಜು ಆವರಣದಲ್ಲಿ ಝಣ ಝಣ ಕಾಂಚಾಣ.. ಬ್ಯಾಡಗಿ ಬಿಜೆಪಿ ಅಭ್ಯರ್ಥಿ ವಿರುಪಾಕ್ಷಪ್ಪ ಬಳ್ಳಾರಿ ಪರ ಪ್ರಚಾರಕ್ಕೆ ಹಣ ನೀಡಿ ಜನರನ್ನು ಕರೆ ತಂದ ಕಾರ್ಯಕರ್ತರು ಜನರಿಗೆ ಹಣ ಹಂಚಿದ ವಿಡಿಯೋ ಇದೀಗ ವೈರಲ್ ಆಗಿದೆ.
ನಿನ್ನೆಯ ದಿನ ಪ್ರಚಾರಕ್ಕೆಂದು ಹಾವೇರಿಗೆ ಆಗಮಿಸಿದ್ದ ಯಡಿಯೂರಪ್ಪ ಪ್ರಚಾರ ಸಭೆಯಲ್ಲಿ ಕೂಡಾ ಕಾರ್ಯಕರ್ತರು ಹಣದ ಹೊಳೆಯನ್ನೇ ಹರಿಸಿದ್ದುನಡು ಬೀದಿಯಲ್ಲಿ 100, 500 ಮುಖ ಬೆಲೆಯ ನೋಟುಗಳು ರಾರಾಜಿಸಿವೆ ಎಂದು ಮೂಲಗಳು ತಿಳಿಸಿವೆ.