Publish Date: Wed, 09 May 2018 (11:24 IST)
Updated Date: Wed, 09 May 2018 (11:26 IST)
ಕೋಲಾರ: ಬಂಗಾರಪೇಟೆಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನಾಮ್ ದಾರ್ ಗಳು ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡೇ ಹುಟ್ಟಿದ್ದಾರೆ. ಆದರೆ ಅದು ಕೋಲಾರದ ಗಣಿಯ ಚಿನ್ನವಲ್ಲ. ವಿದೇಶದಿಂದ ಬಂದ ಚಿನ್ನ. ಹಾಗಾಗಿ ಅವರಿಗೆ ಇಲ್ಲಿನ ಜನರ ಕಷ್ಟ ಗೊತ್ತಿಲ್ಲ ಎಂದು ರಾಹುಲ್ ಗಾಂಧಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಅಷ್ಟೇ ಅಲ್ಲದೆ ತಮ್ಮ ವಾಗ್ದಾಳಿ ಮುಂದುವರಿಸಿದ ಪ್ರಧಾನಿ ‘ದೇಶದಲ್ಲಿ ಬಡವರಿಗೆ ಶೌಚಾಲಯ ವ್ಯವಸ್ಥೆ ಕೂಡಾ ಇಲ್ಲ. ನಮ್ಮ ಸರ್ಕಾರ 5 ಕೋಟಿ ಶೌಚಾಲಯ ನಿರ್ಮಿಸಿದೆ. ಹಾಗಿದ್ದರೂ ಮೋದಿ ಶ್ರೀಮಂತರ ಪರ ಎಂದು ಕಾಂಗ್ರೆಸ್ ನವರು ಟೀಕಿಸುತ್ತಾರೆ. ಕೆಡುಕು ಮಾಡುವುದನ್ನೇ ಕಾಂಗ್ರೆಸ್ ಗುತ್ತಿಗೆಗೆ ಪಡೆದುಕೊಂಡಿದೆ’ ಎಂದಿದ್ದಾರೆ.
ಈ ನಡುವೆ ಕೋಲಾರ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಒದಗಿಸುವುದಾಗಿಯೂ ಭರವಸೆ ನೀಡಿದ್ದಾರೆ. ಗ್ರಾಮೀಣ ಭಾಗದಲ್ಲಿ ನೀರಿಗಾಗಿ ಪಡುವ ಕಷ್ಟದ ಅರಿವು ನನಗಿದೆ. ಹಾಗಾಗಿ ಇದರ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನಪಡುವುದಾಗಿ ಮೋದಿ ಭರವಸೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.