Select Your Language

Notifications

webdunia
webdunia
webdunia
webdunia

ಇರಾನ್ ಪರಮಾಣು ಒಪ್ಪಂದವನ್ನು ರದ್ದುಗೊಳಿಸಿರುವ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಇರಾನ್ ಪರಮಾಣು ಒಪ್ಪಂದವನ್ನು ರದ್ದುಗೊಳಿಸಿರುವ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ವಾಷಿಂಗ್ ಟನ್ , ಬುಧವಾರ, 9 ಮೇ 2018 (15:05 IST)
ವಾಷಿಂಗ್ ಟನ್ : ಇರಾನ್ ಪರಮಾಣು ಒಪ್ಪಂದವನ್ನು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರದ್ದುಗೊಳಿಸಿರುವುದಾಗಿ ತಿಳಿಸಿದ್ದಾರೆ.


ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದೀಗ ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು  ಈ ಒಪ್ಪಂದವನ್ನು ರದ್ದುಗೊಳಿಸಿ ಇರಾನ್ ಮೇಲೆ ನಿರ್ಭಂಧಗಳನ್ನೂ ವಿಧಿಸಿದ್ದಾರೆ.


‘ಈ ಹಿಂದಿನ ಪರಮಾಣು ಒಪ್ಪಂದ ಇರಾನ್ ನ ಅಣ್ವಸ್ತ್ರಗಳ ದಾಹವನ್ನು ಕಡಿಮೆ ಮಾಡಿಲ್ಲ. ಇರಾನ್ ಡೀಲ್ ಸಂಪೂರ್ಣವಾಗಿ ದೋಷಯುಕ್ತವಾಗಿತ್ತು’ ಎಂದು ಆರೋಪಿಸಿ ನ್ಯೂಕ್ಲಿಯರ್ ಡೀಲ್ ನ್ನು ರದ್ದುಗೊಳಿಸುತ್ತಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಇರಾನ್ ನ ಅಣ್ವಸ್ತ್ರಗಳ ದಾಹಕ್ಕೆ ಕಡಿವಾಣ ಹಾಕುವುದಕ್ಕೆ ಸಾಧ್ಯವಿರುವಂತಹ ನ್ಯೂಕ್ಲಿಯರ್ ಡೀಲ್ ನ್ನು ಪರಿಗಣಿಸುವುದಕ್ಕೆ ಸಿದ್ಧವಿರುವುದಾಗಿ ಟ್ರಂಪ್ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

'ಮತದಾನ ಭಾರತೀಯನ ಮೂಲಭೂತ ಹಕ್ಕು’ ಎಂದು ತಿಳಿಸಿದ ನಟ ವಿಜಯ್