Select Your Language

Notifications

webdunia
webdunia
webdunia
webdunia

ವಯಸ್ಕರ ಚಲನಚಿತ್ರ ನಟಿ ಸ್ಟಾರ್ಮಿ ಡೇನಿಯಲ್‌ ಅವರಿಗೆ ಹಣ ನೀಡಲಾಗಿತ್ತು ಎಂದು ಕೊನೆಗೂ ಒಪ್ಪಿಕೊಂಡ ಟ್ರಂಪ್!

ವಯಸ್ಕರ ಚಲನಚಿತ್ರ ನಟಿ ಸ್ಟಾರ್ಮಿ ಡೇನಿಯಲ್‌ ಅವರಿಗೆ ಹಣ ನೀಡಲಾಗಿತ್ತು ಎಂದು ಕೊನೆಗೂ ಒಪ್ಪಿಕೊಂಡ ಟ್ರಂಪ್!
ವಾಷಿಂಗ್ಟನ್ , ಶುಕ್ರವಾರ, 4 ಮೇ 2018 (07:12 IST)
ವಾಷಿಂಗ್ಟನ್ : ಡೊನಾಲ್ಡ್‌ ಟ್ರಂಪ್‌ ಹಾಗೂ ನಟಿ ಸ್ಟಾರ್ಮಿ ಡೇನಿಯಲ್‌ ಅವರ  ನಡುವಿನ ಸಂಬಂಧದ ವಿವಾದದಲ್ಲಿ ಡೇನಿಯಲ್‌ಗೆ ಹಣ ನೀಡಿರಲಿಲ್ಲ ಎಂದು ಈ ಮೊದಲು ಹೇಳಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇದೀಗ ತಮ್ಮಿಬ್ಬರ ನಡುವಿನ ಸಂಬಂಧದ ಬಗ್ಗೆ ಯಾವುದೇ ರೀತಿಯ ಹೇಳಿಕೆ ನೀಡದಂತೆ ವಯಸ್ಕರ ಚಲನಚಿತ್ರ ನಟಿ ಸ್ಟಾರ್ಮಿ ಡೇನಿಯಲ್‌ ಅವರಿಗೆ ಹಣ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.


'ತಮ್ಮ ವಕೀಲ ಮೈಕಲ್‌ ಕೊಹೆನ್‌ ಮೂಲಕ ಡೇನಿಯಲ್‌ಗೆ 86.66 ಲಕ್ಷ ನೀಡಲಾಗಿತ್ತು. ಕೊಹೆನ್‌ ಹಣ ನೀಡಿರುವುದಕ್ಕೂ ಚುನಾವಣಾ ಪ್ರಚಾರದ ವಿಷಯಕ್ಕೂ ಸಂಬಂಧವಿಲ್ಲ. ಸುಳ್ಳು ಹೇಳಿಕೆಗಳು ಮತ್ತು ಆರೋಪಗಳನ್ನು ಮಾಡದಂತೆ ಡೇನಿಯಲ್‌ ಜತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದೊಂದು ಖಾಸಗಿ ಒಪ್ಪಂದವಾಗಿತ್ತು. ಈ ರೀತಿಯ ಒಪ್ಪಂದಗಳು ಶ್ರೀಮಂತರ ನಡುವೆ ಸಾಮಾನ್ಯ. ಜತೆಗೆ ಯಾವುದೇ ರೀತಿಯ ಸಂಬಂಧ ಹೊಂದಿರಲಿಲ್ಲ ಎನ್ನುವ ಪತ್ರಕ್ಕೆ ಸಹಿ ಹಾಕಿದ್ದರೂ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು' ಎಂದು ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿಗೆ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಜೀವ ಬೆದರಿಕೆ ಇದೆ ಎಂದು ಹೇಳಿಕೆ ನೀಡುವುದು ಸರಿಯಲ್ಲ- ಪ್ರಮೋದ್ ಮಧ್ವರಾಜ್