Select Your Language

Notifications

webdunia
webdunia
webdunia
webdunia

ಬಿಜೆಪಿ ಜತೆ ಸರಕಾರ ರಚಿಸಲ್ಲ: ದೇವೇಗೌಡ ಶಪಥ

ಬಿಜೆಪಿ ಜತೆ ಸರಕಾರ ರಚಿಸಲ್ಲ: ದೇವೇಗೌಡ ಶಪಥ
ರಾಮನಗರ , ಗುರುವಾರ, 10 ಮೇ 2018 (13:26 IST)
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಜತೆಗೆ ಸರಕಾರ ರಚಿಸುವುದಿಲ್ಲ ಸ್ವಂತ ಬಲದ ಮೇಲೆ ಜೆಡಿಎಸ್ ಸರಕಾರ ರಚಿಸುವುದಾಗಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಚನ್ನಪಟ್ಟಣದಲ್ಲಿ ತಿಳಿಸಿದ್ರು. 
ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಪುತ್ರ ಹೆಚ್.ಡಿ.ಕುಮಾರಸ್ವಾಮಿ ಪರ ಮತಯಾಚನೆ ಮಾಡಿದ್ರು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೋಡ್ ನಡೆಸಿ ಪಟ್ಟಣದ ಸೇರ್ವಹೋಟೆಲ್ ಬಳಿ ಮುಸ್ಲಿಂ ಭಾಂಧವರನ್ನ ಉದ್ದೇಶಿಸಿ ಹೆಚ್ಡಿಡಿ ಬಹಿರಂಗವಾಗಿ ಮಾತನಾಡಿದ್ರು. 
 
ಹೆಚ್ಡಿಕೆ ಮುಖ್ಯಮಂತ್ರಿಯಾಗಲು ಬಿಜೆಪಿ ಜತೆಗೆ ಕೈಜೋಡಿಸುತ್ತಾರೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ಇದಕ್ಕೆಲ್ಲ ನೀವು ಕಿವಿಗೊಡಬೇಡಿ ಎಂದು ಕೈಮುಗಿದು ಮನವಿ ಮಾಡಿದ್ರು. ನಮ್ಮಲ್ಲೆ ಇದ್ದಂತಹ ಒಬ್ಬರು ಬೆಂಗಳೂರಿನಿಂದ ಬಂದು ಕುಮಾರಸ್ವಾಮಿಗೆ ಮತ ನೀಡಬೇಡಿ 2 ಲಕ್ಷ ಕೊಡುತ್ತಿನಿ, 3 ಲಕ್ಷ ಕೊಡುತ್ತಿನಿ ಎಂದು ಒಬ್ಬ ಮಹಾನುಭಾವ ಹೇಳುತ್ತಿದ್ದಾರೆ ಎಂದು ಜಮೀರ್ ಹೆಸರೇಳದೆ ವಾಗ್ದಾಳಿ ನಡೆಸಿದ್ರು. 
 
ಹೆಚ್ಡಿಕೆ ಎರಡು ಕ್ಷೇತ್ರದಲ್ಲಿ ಗೆಲುತ್ತಾರೆ ಜತೆಗೆ ರಾಜ್ಯದಲ್ಲಿ 113 ಸ್ಥಾನ ಬಂದು ಸರಕಾರ ರಚಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು. ಇನ್ನು ದೇವೇಗೌಡ್ರು ಮಾಗಡಿ ಕ್ಷೇತ್ರಕ್ಕೆ ಬಂದು ಕಣ್ಣೀರು ಹಾಕುತ್ತಾರೆ, ನಗುವ ಹೆಂಗಸನ್ನ ಅಳುವ ಗಂಡಸನ್ನ ನಂಬಬಾರದು ಎಂದು ಹೇಳಿಕೆ ನೀಡಿದ್ದ ಮಾಗಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ.ಬಾಲಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ದೇವೇಗೌಡ್ರು ಅಂತಹ ವ್ಯಕ್ತಿಗಳ ಬಗ್ಗೆ ಒಬ್ಬ ಮಾಜಿ ಪ್ರಧಾನಿ ಬಳಿ ಉತ್ತರ ನೀರಿಕ್ಷೆ ಮಾಡಬಾರದು ಎಂದು ಹೆಚ್ಡಿಡಿ ಬಾಲಕೃಷ್ಣಗೆ ತಿರುಗೇಟು ನೀಡಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ವತ್ ಹಲ್ಲೆ ಪ್ರಕರಣ: ಮೊಹಮ್ಮದ್ ನಲಪಾಡ್ ಪ್ರಕರಣ ಎಲ್ಲಿವರೆಗೆ ಬಂತು?