Publish Date: Thu, 10 May 2018 (13:31 IST)
Updated Date: Thu, 10 May 2018 (13:33 IST)
ಮೇ 17 ರಂದು ಬಿಎಸ್ ಯಡಿಯೂರಪ್ಪ ಪ್ರಮಾಣ ವಚನ ವಿಚಾರಕ್ಕೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಟಾಂಗ್ ನೀಡಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಬಿಎಸ್ವೈ ಕೂಸು ಹುಟ್ಟುವುದಕ್ಕಿಂತ ಮುಂಚೆ ಕೂಲಾಯಿ ಹೋಲಿಯುವ ಹಾಗೇ ಮಾಡ್ತಾ ಇದ್ದಾರೆ. ಬಿಎಸ್ವೈ ಅವರನ್ನು ನೋಡಿದ್ರೆ ಪಾಪ ಕೆಟ್ಟ ಅನಿಸುತ್ತದೆ ಎಂದರು.
ಇನ್ನು ಯಡಿಯೂರಪ್ಪಗೆ ವಯಸ್ಸು ಆಗಿದೆ. ಅವರಿಗೆ ಅರಳು ಮರಳು ಆಗಿ ಹತಾಶರಾಗಿದ್ದಾರೆ ಎಂದರು. ಅಲ್ಲದೇ, ಅವರು ಮುಖ್ಯಮಂತ್ರಿ ಆಗುವುದಿಲ್ಲ. ಅವರ ಮುಂದಿನ ದಿನಗಳ ಬಗ್ಗೆ ದೇವರಲ್ಲಿ ಕೇಳಿಕೊಳ್ತೇನೆ. ಅವರ ನಿವೃತ್ತಿ ಜೀವನ ಸುಖಕರವಾಗಿ 100ವರ್ಷ ಬಾಳಲಿ ಎಂದರು.
ನನ್ನ ಹಾಗೇ ಅವರಿಗೂ ಬಿಪಿ ಜಾಸ್ತಿ ಇದೆ. ಅದಕ್ಕಾಗಿಯೆ ಬೆಳಗ್ಗೆ ಹಾಗೂ ಸಂಜೆ ವಾಕಿಂಗ್ ಮಾಡಿ ಆರಾಮವಾಗಿರಲಿ ಎಂದುಎಂ.ಬಿ. ಪಾಟೀಲ ವ್ಯಂಗ್ಯವಾಡಿದ್ದಾರೆ.