Publish Date: Thu, 17 Aug 2023 (12:42 IST)
Updated Date: Thu, 17 Aug 2023 (13:05 IST)
ಬೆಂಗಳೂರು : ನಗರದ ನೇರಳೆ ಮಾರ್ಗದ ಮೆಟ್ರೋ ಸೇವೆಯಲ್ಲಿ ಇಂದಿನಿಂದ 15 ದಿನಗಳವರೆಗೆ ವ್ಯತ್ಯಯವಾಗಲಿದೆ. ಇಂದು ಕೆಂಗೇರಿ ಹಾಗೂ ಮೈಸೂರು ರಸ್ತೆಯ ಮೆಟ್ರೋ ನಿಲ್ದಾಣಗಳ ನಡುವೆ ಯಾವುದೇ ರೈಲುಗಳು ಸಂಚರಿಸುತ್ತಿಲ್ಲ.
ನೇರಳೆ ಮಾರ್ಗದ ಕೆಂಗೇರಿ ಮತ್ತು ಚಲ್ಲಘಟ್ಟ, ಬೈಯಪ್ಪನಹಳ್ಳಿ ಹಾಗೂ ಕೃಷ್ಣರಾಜಪುರ ಮೆಟ್ರೋ ನಿಲ್ದಾಣಗಳ ನಡುವಿನ ಸಿಗ್ನಲಿಂಗ್ ವ್ಯವಸ್ಥೆಗಳ ಪರೀಕ್ಷೆ ನಡೆಯಲಿರುವ ಕಾರಣ 15 ದಿನಗಳವರೆಗೆ ಮೆಟ್ರೋ ಸೇವೆಯಲ್ಲಿ ವ್ಯತ್ಯಯವಾಗಲಿದೆ. ಮೈಸೂರು ರಸ್ತೆ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳಲ್ಲಿ ಮಾತ್ರ ಬೆಳಗ್ಗೆ 5 ರಿಂದ ರಾತ್ರಿ 11 ರವರೆಗೆ ರೈಲು ಸೇವೆ ಲಭ್ಯವಿರಲಿದೆ.