Select Your Language

Notifications

webdunia
webdunia
webdunia
webdunia

ಚಂದ್ರಯಾನ-3: ಇಂದು ಮಹತ್ವದ ಬೆಳವಣಿಗೆ ಕ್ಷಣಗಣನೆ

ಚಂದ್ರಯಾನ-3: ಇಂದು ಮಹತ್ವದ ಬೆಳವಣಿಗೆ ಕ್ಷಣಗಣನೆ
ಬೆಂಗಳೂರು , ಗುರುವಾರ, 17 ಆಗಸ್ಟ್ 2023 (12:36 IST)
ಬೆಂಗಳೂರು : ಚಂದ್ರಯಾನ-3 ಕ್ಕೆ ಸಂಬಂಧಿಸಿದಂತೆ  ಇಂದು (ಗುರುವಾರ) ಮಧ್ಯಾಹ್ನ ಒಂದು ಗಂಟೆಗೆ ಮಹತ್ವದ ಬೆಳವಣಿಗೆ ನಡೆಯಲಿದೆ ಎಂದು ನೆಹರು ತಾರಾಲಯದ ವಿಜ್ಞಾನಿ ಆನಂದ್ ಹೇಳಿದ್ದಾರೆ.

ಇಂದು ಮಧ್ಯಾಹ್ನ 1 ಗಂಟೆಗೆ ಚಂದ್ರಯಾನ-3ರ   ಮಹತ್ತರ ಬೆಳವಣಿಗೆ ನಡೆಯಲಿದೆ. ಚಂದ್ರಯಾನ-3 ನೌಕೆ ಅಂತಿಮ ಕಕ್ಷೆಗೆ ಯಶಸ್ವಿಯಾಗಿ ಪ್ರವೇಶಿಸಿದೆ. ಉಡಾವಣಾ ವಾಹನದಲ್ಲಿರುವ ಲ್ಯಾಂಡರ್ ಮಾಡ್ಯೂಲ್ ಇಂದು ಮಧ್ಯಾಹ್ನ 1 ಗಂಟೆಗೆ ನೌಕೆಯಿಂದ ಬೇರ್ಪಡುವ ಕಾರ್ಯ ನಡೆಯಲಿದೆ ಎಂದರು.

ಚಂದ್ರಯಾನ-3 ಮಿಷನ್ನ ರಾಕೆಟ್ ಜುಲೈ 14ರಂದು ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಉಡ್ಡಯನ ಕೇಂದ್ರದಿಂದ ಲಾಂಚ್ ಆಗಿತ್ತು. ಭೂಮಿಯ ಕಕ್ಷೆಯಿಂದ ಒಂದೊಂದೇ ಹಂತದಲ್ಲಿ ಚಂದ್ರಯಾನ-3 ನೌಕೆ ಚಂದ್ರನೆಡೆಗೆ ಪ್ರಯಾಣ ಬೆಳೆಸಿದೆ. ಆಗಸ್ಟ್ 23ರಂದು ನೌಕೆ ಚಂದ್ರನ ಮೇಲೆ ಇಳಿಯುವ ಸಾಧ್ಯತೆಯಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಹಾಲು ಕುಡಿದು ಮಲಗಿದ್ದ 3 ತಿಂಗಳ ಪುಟ್ಟ ಕಂದಮ್ಮ ದುರ್ಮರಣ!