Daily Horoscope

Select Your Language

Notifications

webdunia
webdunia
webdunia
webdunia

ಮಕ್ಕಳಿಗೆ ಲಸಿಕೆ, ವಯಸ್ಕರಿಗೆ ಬೂಸ್ಟರ್?

ಓಮೈಕ್ರಾನ್
ದೇಶದಲ್ಲಿ ಓಮೈಕ್ರಾನ್ ಸೋಂಕು ಹೆಚ್ಚುತ್ತಿರುವ ಹಿನ್ನಲೆ ಮುಂಚೂಣಿ ಆರೋಗ್ಯ ಕಾರ್ಯಕರ್ತರು ಹಾಗೂ 60 ಮೇಲ್ಪಟ್ಟವರಿಗೆ ಮುನ್ನೆಚ್ಚರಿಕಾ ಲಸಿಕೆ ನೀಡಲು ಸರ್ಕಾರ ಮುಂದಾಗಿದೆ.
 
ಈ ನಡುವೆ ಹದಿ ವಯಸ್ಸಿನವರಿಗೆ ಬೂಸ್ಟರ್ ಡೋಸ್ ಯಾವಾಗ ಸಿಗಲಿದೆ ಎಂಬ ಪ್ರಶ್ನೆ ಮೂಡಿದೆ. ಈ ಸಂಬಂಧ ಕೋವಿಡ್ ಲಸಿಕೆಯಲ್ಲಿ ಭಾರತದ ಎರಡು ಅಗ್ರ ಪ್ಯಾನಲ್ಗಳಾದ The NTAGI ಹಾಗೂ NEGVAC ಮೊದಲ ಬಾರಿಗೆ ಚರ್ಚೆ ನಡೆಸಲಿದೆ.

ಪ್ರಧಾನಿಯವರೊಂದಿಗೆ ಒಂದೆರಡು ಸಭೆಗಳ ನಂತರ ಆರೋಗ್ಯ ಸಚಿವಾಲಯದ ಉನ್ನತ ಅಧಿಕಾರಿಗಳು ಪ್ಯಾನಲ್ನಲ್ಲಿ ಈ ಕುರಿತು ಶಿಫಾರಸುಗಳನ್ನು ಚರ್ಚಿಸಲಿದ್ದಾರೆ.

ಹದಿಹರೆಯದ ಮಕ್ಕಳಿಗೆ ಲಸಿಕೆ ಹಾಗೂ ವಯಸ್ಕರಿಗೆ ಬೂಸ್ಟರ್ ಲಸಿಕೆಗಳನ್ನು ವಿತರಿಸುವ ನಿಟ್ಟಿನಲ್ಲಿ ಐದಕ್ಕಿಂತ ಹೆಚ್ಚಿನ ಸಭೆಗಳನ್ನು ಮುಂದಿನ ಮೂರು ದಿನಗಳಲ್ಲಿ ನರೇಂದ್ರ ಮೋದಿ ಸರಕಾರವು ನಡೆಸಲಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಹೀಗೂ ಉಂಟೇ : 35 ವರ್ಷಗಳಿಂದ ಗರ್ಭ ಧರಿಸಿದ್ದ ಮುದುಕಿ..!