Select Your Language

Notifications

webdunia
webdunia
webdunia
webdunia

ಹೀಗೂ ಉಂಟೇ : 35 ವರ್ಷಗಳಿಂದ ಗರ್ಭ ಧರಿಸಿದ್ದ ಮುದುಕಿ..!

ಹೀಗೂ ಉಂಟೇ : 35 ವರ್ಷಗಳಿಂದ ಗರ್ಭ ಧರಿಸಿದ್ದ ಮುದುಕಿ..!
ಅಲ್ಜೀರಿಯಾ , ಮಂಗಳವಾರ, 28 ಡಿಸೆಂಬರ್ 2021 (05:47 IST)
ಅಲ್ಜೀರಿಯಾದ ಮಹಿಳೆಯೊಬ್ಬರಿಗೆ ತನ್ನ ಅರ್ಧ ವಯಸ್ಸಿನವರೆಗೆ ತನ್ನ ಹೊಟ್ಟೆಯಲ್ಲಿ ಮಗುವಿದೆ ಎಂಬುದೇ ತಿಳಿದಿರಲಿಲ್ಲ.

ಇದಕ್ಕೆ ಮುಖ್ಯ ಕಾರಣ ಅಸಾಮಾನ್ಯ ಗರ್ಭಧಾರಣೆ. 35 ವರ್ಷಗಳ ನಂತರ, ಹೊಟ್ಟೆಯಲ್ಲಿ ಭಯಂಕರ ನೋವು ಕಾಣಿಸಿಕೊಂಡಾಗಲಷ್ಟೇ ತಾನು ಗರ್ಭಿಣಿಯಾಗಿದ್ದೆ ಎಂಬುದು ಗೊತ್ತಾಗಿದೆ.

ಅಲ್ಜೀರಿಯಾದ 73 ವರ್ಷದ ಮಹಿಳೆಯೊಬ್ಬರಿಗೆ ಇದ್ದಕ್ಕಿದ್ದಂತೆ ಹೊಟ್ಟೆಯಲ್ಲಿ ತೀವ್ರವಾದ ನೋವು ಕಾಣಿಸಿತು. ಸಹಿಸಲಾಗದ ನೋವಿನಿಂದ ಕಿರುಚುತ್ತಿದ್ದ ಮುದುಕಿಯನ್ನು ಕುಟುಂಬಸ್ಥರು ವೈದ್ಯರ ಬಳಿಗೆ ಕರೆದುಕೊಂಡು ಹೋಗಿದ್ದರು.

ಹೊಟ್ಟೆ ನೋವಿಗೆ ಕಾರಣವೇನು ಎಂದು ವೈದ್ಯರು ಸ್ಕ್ಯಾನಿಂಗ್ ಮೂಲಕ ಪರಿಶೀಲಿಸಿದಾಗ ದಿಗ್ಭ್ರಮೆಗೊಂಡರು. ಏಕೆಂದರೆ ಹಲವಾರು ದಶಕಗಳಿಂದ ವಯಸ್ಸಾದ ಮಹಿಳೆಯ ಹೊಟ್ಟೆಯಲ್ಲಿ 7 ತಿಂಗಳ ಭ್ರೂಣವಿತ್ತು. ವಿಚಿತ್ರವೆಂದರೆ ಆ ಮಹಿಳೆಗೆ ಈ ಬಗ್ಗೆ ಗೊತ್ತೇ ಇರಲಿಲ್ಲ.

ಸನ್ ವರದಿಯ ಪ್ರಕಾರ, ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾದ ಮಹಿಳೆಯನ್ನು ತಪಾಸಣೆ ನಡೆಸಿದಾಗ ಹೊಟ್ಟೆಯಲ್ಲಿ ಸುಮಾರು 35 ವರ್ಷದಿಂದ ಏಳು ತಿಂಗಳ ಭ್ರೂಣ ಇರುವುದು ಪತ್ತೆಯಾಗಿದೆ.

ಅಷ್ಟೇ ಅಲ್ಲದೆ ಈ ಭ್ರೂಣವು ಕಲ್ಲಿನಂತೆ ಮಾರ್ಪಟ್ಟಿದೆ. ಇಂತಹ ಅಪರೂಪದ ಪ್ರಕರಣಗಳನ್ನು ಸಾಮಾನ್ಯ ಭಾಷೆಯಲ್ಲಿ ಬೇಬಿ ಸ್ಟೋನ್ ಎನ್ನಲಾಗುತ್ತದೆ. ಇದೀಗ 2 ಕೆ.ಜಿ ಆಗಿದ್ದ ಈ ಭ್ರೂಣವನ್ನು ವೈದ್ಯರು ಹೊರ ತೆಗೆದಿದ್ದಾರೆ.

ಇಂತಹ ಪ್ರಕರಣ ಬಹಳ ಅಪರೂಪವಾಗಿ ಕಂಡು ಬರುತ್ತವೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಲಿಥೋಪಿಡಿಯನ್ ಎಂಬ ಸ್ಥಿತಿ ಎಂದು ಕರೆಯಲಾಗುತ್ತದೆ. ಭ್ರೂಣವು ಹೊಟ್ಟೆಯಲ್ಲೇ ಉಳಿಯುವುದರಿಂದಕಲ್ಲಾಗಲು ಪ್ರಾರಂಭಿಸುತ್ತದೆ. ಮಹಿಳೆಯ ದೇಹದಲ್ಲಿ ಪತ್ತೆಯಾದ ಬೇಬಿ ಸ್ಟೋನ್ ಕೂಡ ಇದೇ ಕಾರಣದಿಂದ ಉಂಟಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿಗರೇ ಎಚ್ಚರ – ರಾತ್ರಿ ಅನಗತ್ಯ ಓಡಾಡಿದ್ರೆ ಬೀಳುತ್ತೆ ಕೇಸ್