Select Your Language

Notifications

webdunia
webdunia
webdunia
webdunia

ಕೇರಳದಲ್ಲಿ ಹದಿಹರೆಯ ಯುವತಿಯರಲ್ಲಿ ಹೆಚ್ಚಾಗುತ್ತಿದೆ ಗರ್ಭಧಾರಣೆ

ಕೇರಳದಲ್ಲಿ ಹದಿಹರೆಯ ಯುವತಿಯರಲ್ಲಿ ಹೆಚ್ಚಾಗುತ್ತಿದೆ ಗರ್ಭಧಾರಣೆ
ಕೇರಳ , ಶುಕ್ರವಾರ, 8 ಅಕ್ಟೋಬರ್ 2021 (17:05 IST)
ಕೇರಳ : ದೇಶದಲ್ಲಿ ಹೆಚ್ಚು ಶಿಕ್ಷಿತರಿರುವ ರಾಜ್ಯ, ದೇವರ ನಾಡು ಎಂದು ಕರೆಸಿಕೊಳ್ಳುವ ಕೇರಳದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿವೆ.

ಇದರ ಪರಿಣಾಮ 2019ರಲ್ಲಿ 20,995 ಹೆರಿಗೆಯಾದ ಮಹಿಳೆಯರು ಹದಿಹರೆಯದವರಾಗಿದ್ದಾರೆ ಎಂಬ ಆತಂಕಕಾರಿ ವಿಷಯ ಸರ್ಕಾರವೇ ಬಿಡುಗಡೆ ಮಾಡಿರುವ ಮಾಹಿತಿಯಿಂದ ಬಹಿರಂಗವಾಗಿದೆ.
ಕೇರಳ ಸರ್ಕಾರದ ಅರ್ಥಶಾಸ್ತ್ರ ಮತ್ತು ಅಂಕಿ ಅಂಶಗಳ ವಿಭಾಗವು ವಿವರವಾದ ವರದಿಯನ್ನು ಬಿಡುಗಡೆ ಮಾಡಿದ್ದು, ಈ ವರದಿ ಆಘಾತಕಾರಿಯಾಗಿದೆ. 2018ರಲ್ಲೂ ಇದೇ ರೀತಿ 20461 ಪ್ರಕರಣಗಳನ್ನು ಗುರುತಿಸಲಾಗಿದ್ದು, ನಂತರದ ವರ್ಷದಲ್ಲೇ 534 ಪ್ರಕರಣಗಳ ಹೆಚ್ಚಳ ಕಂಡು ಬಂದಿದೆ. ಈ ಡೇಟಾ ಕೇರಳದಲ್ಲಿ ಬಾಲ್ಯವಿವಾಹ ಮತ್ತು ಗರ್ಭಧಾರಣೆ ಹೇಗೆ ಚಾಲ್ತಿಯಲ್ಲಿದೆ ಎಂಬ ಘೋರ ವಾಸ್ತವವನ್ನು ತೋರಿಸುತ್ತದೆ.
15ರಿಂದ 19 ವಯಸ್ಸಿನ ಹುಡುಗಿಯರು, ನಗರ ಪ್ರದೇಶಗಳಲ್ಲಿ 10,613 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 5,747 ಮಕ್ಕಳಿಗೆ ಜನ್ಮ ನೀಡಿರುವುದು ಈ ರಾಜ್ಯದಲ್ಲಿ ನೋಂದಾಯಿಸಲ್ಪಟ್ಟಿವೆ. ಇದಲ್ಲದೆ, 5,239 ಹೆರಿಗೆಗಳು ಸಿಸೇರಿಯನ್ ಆಗಿವೆ. 2018ರಲ್ಲಿ ಈ ಯಾವುದೇ ತಾಯಂದಿರ ಮರಣ ವರದಿಯಾಗಿಲ್ಲದಿದ್ದರೂ, 2019ರಲ್ಲಿ ಎರಡು ಸಾವುಗಳು ದಾಖಲಾಗಿವೆ. ಒಟ್ಟಾರೆ, 99 ಹೆರಿಗೆಗಳಲ್ಲಿ ಮಹಿಳೆಯ ಸಾವು ಅಥವಾ ಹೆರಿಗೆಯ ಮೊದಲು ಅಥವಾ ಹೆರಿಗೆಯ ಸಮಯದಲ್ಲಿ ಮಗು ಸಾವಿಗೀಡಾಗಿರುವ ಪ್ರಕರಣಗಳೂ ಕಂಡು ಬಂದಿವೆ. ಇನ್ನು, 20,597 ಹುಡುಗಿಯರು ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದರೆ, 316 ಹದಿಹರೆಯದ ಬಾಲಕಿಯರು ಎರಡನೇ ಮಗುವಿಗೆ, 59 ಬಾಲಕಿಯರು ಮೂರನೇ ಮಗುವಿಗೆ ಹಾಗೂ 16 ಹುಡುಗಿಯರು 4ನೇ ಮಗುವಿಗೆ ಜನ್ಮ ನೀಡಿದ್ದಾರೆ.
ಕುತೂಹಲಕಾರಿ ಸಂಗತಿ ಎಂದರೆ, ಈ ಹದಿಹರೆಯದವರಲ್ಲಿ ಹೆಚ್ಚಿನವರು ಪ್ರಾಥಮಿಕ ಅಥವಾ ಉನ್ನತ ಶಿಕ್ಷಣ ಪಡೆದಿದ್ದಾರೆ. ಈ ಪೈಕಿ 4,285 ಹುಡುಗಿಯರು ಹಿಂದೂ ಸಮುದಾಯದವರಾಗಿದ್ದರೆ, 16,089 ಹುಡುಗಿಯರು ಮುಸ್ಲಿಂ ಸಮುದಾಯದವರು ಹಾಗೂ 586 ಕ್ರಿಶ್ಚಿಯನ್ ಸಮುದಾಯದ ಹುಡುಗಿಯರು ತಾಯಂದಿರಾಗಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಚಿತ್ರಕಲಾ ಪರಿಷತ್ತಿನಲ್ಲಿ ದಸರಾ ಗೊಂಬೆಗಳ ವಿಶೇಷ ಪ್ರದರ್ಶನ