Select Your Language

Notifications

webdunia
webdunia
webdunia
webdunia

15 ರಿಂದ 18 ವರ್ಷದವರು ಲಸಿಕೆಗೆ ಹೆಸರು ನೋಂದಣಿ ಚಾಲ್ತಿ

15 ರಿಂದ 18 ವರ್ಷದವರು ಲಸಿಕೆಗೆ ಹೆಸರು ನೋಂದಣಿ ಚಾಲ್ತಿ
ನವದೆಹಲಿ , ಸೋಮವಾರ, 27 ಡಿಸೆಂಬರ್ 2021 (15:07 IST)
ನವದೆಹಲಿ : ಭಾರತದಲ್ಲಿ ಕೋವಿಡ್ ರೂಪಾಂತರಿ ಓಮಿಕ್ರಾನ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನವರಿ 3 ರಿಂದ 15ರಿಂದ 18 ವರ್ಷದ ಮಕ್ಕಳಿಗೂ ಕೋವಿಡ್ ಲಸಿಕೆಯನ್ನು ನೀಡುವುದಾಗಿ ಸರ್ಕಾರ ಯೋಜಿಸಿದೆ.
 
ಇದಕ್ಕಾಗಿ ಕೋವಿನ್ ಪೋರ್ಟಲ್ನಲ್ಲಿ ಜನವರಿ 1ರಿಂದ ನೋಂದಾಯಿಸಿಕೊಳ್ಳಬಹುದು ಎಂದು ಕೋವಿನ್ ಪ್ಲಾಟ್ಫಾರ್ಮ್ ಮುಖ್ಯಸ್ಥ ಡಾ. ಆರ್ಎಸ್ ಶರ್ಮಾ ತಿಳಿಸಿದ್ದಾರೆ.

ಜನವರಿ 1ರಿಂದ ಕೋವಿನ್ನಲ್ಲಿ 15 ವರ್ಷ ಮೇಲ್ಪಟ್ಟ ಮಕ್ಕಳು ನೋಂದಾಯಿಸಿಕೊಳ್ಳಲು ಸಾಧ್ಯವಾಗಲಿದೆ. ಕೆಲವು ವಿದ್ಯಾರ್ಥಿಗಳಲ್ಲಿ ಆಧಾರ್ ಕಾರ್ಡ್ ಅಥವಾ ಇತರ ಗುರುತಿನ ಚೀಟಿಗಳು ಇಲ್ಲದಿರುವುದರಿಂದ ಲಸಿಕೆಗೆ 10ನೇ ತರಗತಿಯ ಐಡಿ ಕಾರ್ಡ್ ಅಗತ್ಯ ಬೀಳಲಿದೆ. 

ದೇಶದಲ್ಲಿ 18 ವರ್ಷ ಮೇಲ್ಪಟ್ಟ ಜನಸಂಖ್ಯೆಯಲ್ಲಿ 61% ಜನರು ಎರಡು ಡೋಸ್ ಪಡೆದಿದ್ದಾರೆ ಹಾಗೂ 90% ಜನರು 1 ಡೋಸ್ ಪಡೆದಿದ್ದಾರೆ ಎಂದು ಪ್ರಧಾನಿ ತಿಳಿಸಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಬಿಎಂಟಿಸ್ ಯಲ್ಲಿ ಸಿಸಿಟಿವಿ ಅಳವಡಿಕೆ