Publish Date: Wed, 04 Apr 2018 (18:25 IST)
Updated Date: Wed, 04 Apr 2018 (18:27 IST)
ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿದ ಸ್ಟಾರ್ ನಟರು? ಹೀಗಂತ ಕೇಳಿದರೆ ಯಾವ ನಟರು ಎಂದು ಕೇಳಬೇಡಿ.
ಕೊಪ್ಪಳದ ಕೆಲವು ಕ್ಷೇತ್ರಗಳಲ್ಲಿ ಸ್ಟಾರ್ ನಟರ ಚಿತ್ರಗಳನ್ನು ಬಳಸಿಕೊಂಡು ಪ್ರಚಾರ ನಡೆಸಲಾಗುತ್ತಿದೆ. ಈ ಚಿತ್ರಗಳು ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ. ಹಲವರಿಂದ ಚಿತ್ರಗಳು ಹರಿದಾಡುತ್ತಿದ್ದರೂ ಸಹ ಚುನಾವಣಾ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ವಿವಿಧ ಸಿನಿಮಾ ನಾಯಕ ನಟರು ಒಂದು ಪಕ್ಷದ ಪರ ಪ್ರಚಾರ ಮಾಡುವ ರೀತಿ ಎಡಿಟ್ ಮಾಡಿರೋ ಫೋಟೊಗಳನ್ನು ಪೋಸ್ಟ್ ಮಾಡಲಾಗುತ್ತಿದೆ. ಈ ಚಿತ್ರಗಳು ಕೊಪ್ಪಳ ಜಿಲ್ಲೆಯಾದ್ಯಂತ ಹರಿದಾಡುತ್ತಿವೆ.
ನಟ ಗಣೇಶ, ಸುದೀಪ್ ಅಭ್ಯರ್ಥಿಗಳ ಫೋಟೊ ಹಿಡಿದು ಪ್ರಚಾರ ಮಾಡುತ್ತಿರುವದು ಕಾಂಗ್ರೆಸ್, ಬಿಜೆಪಿ,ಜೆಡಿಎಸ್ ಪಕ್ಷದ ಕಾರ್ಯಕರ್ತರ ಕೃತ್ಯ ಎಂದು ಶಂಕಿಸಲಾಗಿದೆ.