Publish Date: Mon, 02 Apr 2018 (14:54 IST)
Updated Date: Mon, 02 Apr 2018 (14:56 IST)
ಹಾಸನ ಉಪವಿಭಾಗಧಿಕಾರಿ ಹೆಚ್. ಎಲ್. ನಾಗರಾಜ್‌ರನ್ನುರಾಮನಗರ ಜಿಲ್ಲೆಗೆ ವರ್ಗಾವಣೆಗೊಳಿಸಿದ ಚುನಾವಣಾ ಆಯೋಗ. ಮತ್ತೊಬ್ಬ ಅಧಿಕಾರಿ ಎನ್ ಮಂಜುನಾಥ್‌ರನ್ನು ಯಾದಗಿರಿಗೆ ವರ್ಗಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹೇಮಾವತಿ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಜಗದೀಶ್ ಕೃಷ್ಣರನ್ನು ಭಾಗ್ಯ ಜಲ ನಿಗಮಕ್ಕೆ ವರ್ಗಾವಣೆ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾಧೀನಾಧಿಕಾರಿ ತಬಸ್ಸುಮ್ ಜಹೇರಾ ಹಾಸನ ಎಸಿಯಾಗಿ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರಿನ ಎಸಿ ಕಚೇರಿಯಲ್ಲಿದ್ದ ಬಿ. ಕೆ. ನಾಗರತ್ನ ಹಾಸನ ತಹಶೀಲ್ದಾರ್ ಆಗಿ ವರ್ಗಾವಣೆ . ಪ್ರೋಬೆಷನರಿ ತಹಶೀಲ್ದಾರ್‌ರಾಗಿದ್ದ ಜೆ. ಉಮೇಶ್ ಅರಕಲಗೂಡು ತಹಶೀಲ್ದಾರ್ ಆಗಿ ವರ್ಗಾವಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.