Publish Date: Mon, 02 Apr 2018 (14:48 IST)
Updated Date: Mon, 02 Apr 2018 (14:50 IST)
ವರ್ಷಕ್ಕೊಮ್ಮೆ ಮಾತ್ರ ದರ್ಶನ ಕೊಡುವ ಹಾಸನಾಂಬ ದೇವಾಲಯದಲ್ಲಿ ಕಳ್ಳತನ ಪ್ರಯತ್ನ ಮಾಡಲಾಗಿದೆ. ಇದೇ ಮೊದಲ ಸಲ ಇಂತಹ ಪ್ರಯತ್ನ ನಡೆದಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.
ದೇವಾಲಯದ ಮುಂಭಾಗಿಲು ಚಿಲಕ ಮುರಿಯುವಲ್ಲಿ ಯಶಸ್ವಿಯಾದ ಕಳ್ಳರಿಗೆ ದೇವಾಲಯದ ಎರಡನೇ ಬಾಗಿಲು ತೆರೆಯಲು ಸಾಧ್ಯವಾಗಿಲ್ಲವಾದ್ದರಿಂದ ಹಣ ಮತ್ತು ಒಡವೆ ಜಿಲ್ಲೆಯ ಖಜಾನೆಯಲ್ಲಿ ಭದ್ರವಾಗಿದೆ ಎಂದು ಅಡಳಿತ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ರಾತ್ರಿ ನಡೆದ ಘಟನೆಯಿಂದಾಗಿ ಪೆನ್‌ಷನ್ ಮೊಹಲ್ಲಾ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ದೇವಾಲಯಕ್ಕೆ ಹೆಚ್ಚಿನ ಭದ್ರತೆ ಒದಗಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.