Publish Date: Fri, 23 Mar 2018 (09:24 IST)
Updated Date: Fri, 23 Mar 2018 (09:26 IST)
ಬೆಂಗಳೂರು: ಮಂಜೇಗೌಡರ ಜತೆ ಎಚ್ ಡಿ ರೇವಣ್ಣ ಸೋಲಿಸಲು ಸಿಎಂ ಸಿದ್ದರಾಮಯ್ಯ ನಡೆಸಿದ್ದಾರೆನ್ನಲಾದ ಫೋನ್ ಸಂಭಾಷಣೆ ಇದೀಗ ಸಿಎಂ ಸಿದ್ದರಾಮಯ್ಯ-ಜೆಡಿಎಸ್ ನಾಯಕರ ನಡುವಿನ ವಾಗ್ಯುದ್ದಕ್ಕೆ ಕಾರಣವಾಗಿದೆ.
ಮಂಜೇಗೌಡರ ಜತೆ ಸಂಭಾಷಣೆ ನಡೆಸಿದ್ದು ನಾನೇ ಏನಿವಾಗ? ಕುಮಾರಸ್ವಾಮಿ ಎಂದು ಮೈಸೂರಿಗೆ ಬಂದು ನನಗೆ ಮುತ್ತಿಟ್ಟು ಹೋಗಿದ್ದಾರಾ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.
ಇನ್ನೊಂದೆಡೆ ಜೆಡಿಎಸ್ ವರಿಷ್ಠ ದೇವೇಗೌಡ, ಹಾಸನಕ್ಕೇ ಬಂದು ನನಗೇ ಸವಾಲು ಹಾಕ್ತಾರಾ ಸಿಎಂ ಸಿದ್ದರಾಮಯ್ಯ? ಅವರು ಅಖಾಡಕ್ಕೆ ಇಳಿಯಲಿ. ನಮ್ಮ ತಾಕತ್ತು ಏನೆಂದು ತೋರಿಸುತ್ತೇವೆ. ಸವಾಲು ಹಾಕಿದರೆ ಬಿಡ್ತೀವಾ? ಇನ್ನೊಮ್ಮೆ ಹಾಸನಕ್ಕೆ ಬಂದು ನೋಡಲಿ ಎಂದು ಸವಾಲಿಗೆ ಪ್ರತಿ ಸವಾಲು ಹಾಕಿದ್ದಾರೆ. ಈ ನಾಯಕರ ವಾಕ್ಸಮರ ಇನ್ನೆಲ್ಲಿಗೆ ಮುಟ್ಟುತ್ತೋ ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ