Publish Date: Tue, 14 Aug 2018 (09:03 IST)
Updated Date: Tue, 14 Aug 2018 (09:05 IST)
ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿ ಮೋದಿಗೆ ಹೆಣ್ಣು ನೋಡ್ತಾರಂತೆ! ಹಾಗಂತ ಅವರೇ ಹೇಳಿದ್ದರಂತೆ!
ಇದು ನಡೆದಿದ್ದು ಕಳೆದ ವರ್ಷ ಪ್ರಧಾನಿ ಮೋದಿ ಅಮೆರಿಕಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ. ಮೋದಿ ಭೇಟಿಗೆ ಮೊದಲು ಟ್ರಂಪ್ ಗೆ ಅವರ ಆಪ್ತರು ಭಾರತೀಯ ಪ್ರಧಾನಿ ಪತ್ನಿಯನ್ನು ತ್ಯಜಿಸಿದ್ದಾರೆ. ಅವರು ಏಕಾಂಗಿ ಎಂದಿದ್ದರಂತೆ. ಇದನ್ನು ಕೇಳಿ ಟ್ರಂಪ್ ತಮ್ಮ ಆಪ್ತರ ಬಳಿ ಹಾಗಿದ್ದರೆ ಅವರಿಗೆ ಒಂದು ಹೆಣ್ಣು ನೋಡುತ್ತೇನೆ ಎಂದು ಹಾಸ್ಯ ಮಾಡಿದ್ದರಂತೆ.
ಹೀಗಂತ ಪೊಲಿಟಿಕೋ ಬ್ಯೂರೋ ವರದಿ ಮಾಡಿದೆ. ಮೋದಿಯ ಬಗ್ಗೆ ಟ್ರಂಪ್ ಈ ರೀತಿ ತಮಾಷೆ ಮಾಡುವಾಗ ಅಲ್ಲಿ ಹಾಜರಿದ್ದ ಇಬ್ಬರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.