ನವದೆಹಲಿ : ದೇಶಾದ್ಯಂತ ವಿವಿಧೆಡೆ ಮಳೆಯ ಆರ್ಭಟ ಜೋರಾಗಿದೆ.
ನೈಸರ್ಗಿಕ ವಾತಾವರಣದ ಬದಲಾವಣೆ ಹಾಗೂ ಹವಾಮಾನ ವೈಪರೀತ್ಯ ಕಾರಣಗಳಿಂದಾಗಿ ಇಂದು ವಿವಿಧೆಡೆಯಿಂದ ಸಂಚರಿಸಬೇಕಿದ್ದ ಒಟ್ಟು 165ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ಭಾರತೀಯ ರೈಲ್ವೆ ಇಂದು ಬೆಳಗ್ಗೆ ಪ್ರಕಟಿಸಿದೆ.
ಇತ್ತೀಚಿನ ಅಧಿಸೂಚನೆಯ ಪ್ರಕಾರ IRCTC ವೆಬ್ಸೈಟ್ನಲ್ಲಿ ಸುಮಾರು 37 ರೈಲುಗಳ ಸಂಚಾರವನ್ನು ರದ್ದುಗೊಳಿರುವುದಾಗಿ ತಿಳಿಸಿದೆ. ಈ ಪಟ್ಟಿಯಲ್ಲಿ ಪುಣೆ, ಪಠಾಣ್ಕೋಟ್, ಅಜಿಮ್ಗಂಜ್, ಬೊಕಾರೊ, ಸತಾರಾ ಮುಂತಾದ ಹಲವಾರು ಭಾರತೀಯ ನಗರಗಳಿಂದ ಚಲಿಸುವ ರೈಲುಗಳೂ ಸೇರಿವೆ.
ಈ ಕುರಿತಂತೆ ಯಾವುದೇ ಸಂದೇಹಗಳಿದ್ದರೂ enquiry.indianrail.gov.inಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳಬಹುದು ಎಂದು ತಿಳಿಸಿದೆ. ಇನ್ನೂ ನಿಗದಿತ ರೈಲುಗಳ ಅಗಮನ ಮತ್ತು ನಿರ್ಗಮನದ ಸಮಯವನ್ನು ವೆಬ್ಸೈಟ್ನಲ್ಲಿ ಪರಿಶೀಲಿಸಿಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.