Select Your Language

Notifications

webdunia
webdunia
webdunia
webdunia

ಇದೆಂತಾ ವಿಚಿತ್ರ ! ಮಳೆಗಾಗಿ ಗೋರಿಯಲ್ಲಿದ್ದ ಶವಕ್ಕೆ ನೀರು ಬಿಟ್ಟ ಗ್ರಾಮಸ್ಥರು

ಇದೆಂತಾ ವಿಚಿತ್ರ ! ಮಳೆಗಾಗಿ ಗೋರಿಯಲ್ಲಿದ್ದ ಶವಕ್ಕೆ ನೀರು ಬಿಟ್ಟ ಗ್ರಾಮಸ್ಥರು
ವಿಜಯಪುರ , ಸೋಮವಾರ, 11 ಜುಲೈ 2022 (06:43 IST)
ವಿಜಯಪುರ : ಮಳೆಗಾಗಿ ಜನರು ಪೂಜೆ, ಹೋಮ, ಹವನ ಮಾಡೋದನ್ನು ಸಾಮಾನ್ಯವಾಗಿ ನೋಡಿದ್ದೀರಾ.
 
ಆದರೆ ವಿಜಯಪುರ ಜಿಲ್ಲೆಯಲ್ಲಿ ಗೋರಿಯಲ್ಲಿ ಹೂತಿದ್ದ ಶವದ ಬಾಯಿಗೆ ನೀರು ಹಾಕಿ ಮಳೆಗಾಗಿ ಗ್ರಾಮಸ್ಥರು ಪ್ರಾರ್ಥನೆ ಮಾಡಿದ ವಿಚಿತ್ರ ಘಟನೆ ನಡೆದಿದೆ.

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಮಳೆಗಾಗಿ ಶವದ ಬಾಯಿಗೆ ಗ್ರಾಮಸ್ಥರು ನೀರು ಹಾಕಿದ್ದಾರೆ. ಗೋರಿಯಲ್ಲಿ ಹೂತಿದ್ದ ಶವದ ಬಾಯಿಗೆ ಟ್ರ್ಯಾಕ್ಟರ್ನಿಂದ ಪೈಪ್ ಮೂಲಕ ನೀರು ಹಾಕಿದ್ದಾರೆ.  

ಜಿಲ್ಲೆಯಲ್ಲಿ ಮಳೆಯಾಗದ ಕಾರಣ ರೈತಾಪಿ ವರ್ಗ ಆತಂಕಗೊಂಡಿದೆ. ಈ ರೀತಿ ಶವದ ಬಾಯಿಗೆ ನೀರು ಹಾಕಿದರೆ ಮಳೆ ಬರುತ್ತದೆ ಎನ್ನುವ ನಂಬಿಕೆ ಗ್ರಾಮಸ್ಥರಲ್ಲಿದೆ. ಹೀಗಾಗಿ ಗೋರಿಯಲ್ಲಿದ್ದ ಶವದ ಬಾಯಿಗೆ ಟ್ಯಾಂಕರ್ ಮೂಲಕ ನೀರು ತಂದು ಗ್ರಾಮಸ್ಥರು ಹಾಕಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಜರ್ಮನಿಯಲ್ಲಿನ ಉಕ್ರೇನ್‌ ರಾಯಭಾರಿಗಳ ವಜಾ