Publish Date: Sat, 09 Oct 2021 (15:16 IST)
Updated Date: Sat, 09 Oct 2021 (15:23 IST)
ಮೈಸೂರು : ದಸರಾ ಹಬ್ಬದ ಮೇಲೆ ಮೈಸೂರು ರಂಗೇರಿರುತ್ತದೆ. ಈ ವರ್ಷ ಮೈಸೂರಿನ ದಸರಾ ವೀಕ್ಷಣೆಗೆ ಹೆಚ್ಚು ಜನರಿಗೆ ಅವಕಾಶವಿಲ್ಲದಿದ್ದರೂ ಇಡೀ ನಗರ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ.
ಮೈಸೂರಿನ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳಿಗೆ ಈ ಸಂದರ್ಭದಲ್ಲಿ ಪ್ರವಾಸಿಗರ ದಂಡೇ ಬರುತ್ತದೆ. ದಸರಾ ಹಬ್ಬದ ವೇಳೆ ಸಾಲು ಸಾಲು ರಜೆಗಳು ಕೂಡ ಇರುವುದರಿಂದ ಕೆಎಸ್ಆರ್ಟಿಸಿಯಿಂದ ಮೈಸೂರು ಟೂರ್ ಪ್ಯಾಕೇಜ್ ಘೋಷಣೆ ಮಾಡಲಾಗಿದೆ.
ನಿನ್ನೆಯಿಂದ ಮೈಸೂರು ದಸರಾ ಉತ್ಸವ ಶುರುವಾಗಿದ್ದು, ಅಕ್ಟೋಬರ್ 15ರವರೆಗೆ ಸರಳವಾಗಿ ಈ ಬಾರಿಯ ಮೈಸೂರು ದಸರಾ ನಡೆಯಲಿದೆ. ಪ್ರವಾಸಿಗರಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮೈಸೂರು ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ. ಮೈಸೂರಿನ ಸುತ್ತಮುತ್ತಲಿನ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಲು ಕೆಎಸ್ಆರ್ಟಿಸಿಯಿಂದ ಟೂರ್ ಪ್ಯಾಕೇಜ್ ವ್ಯವಸ್ಥೆ ಮಾಡಲಾಗಿದ್ದು, ಅಕ್ಟೋಬರ್ 9ರಿಂದ 24ರವರೆಗೆ ಗಿರಿ ದರ್ಶಿನಿ, ದೇವ ದರ್ಶಿನಿ, ಜಲ ದರ್ಶಿನಿ ಪ್ಯಾಕೇಜ್‌ಗಳನ್ನು ಘೋಷಿಸಲಾಗಿದೆ.