Select Your Language

Notifications

webdunia
webdunia
webdunia
webdunia

ದಸರಾ ನಂತರ ಶಾಲೆ ಆರಂಭ ಆಗುತ್ತಾ?

ದಸರಾ ನಂತರ ಶಾಲೆ ಆರಂಭ ಆಗುತ್ತಾ?
bangalore , ಶುಕ್ರವಾರ, 8 ಅಕ್ಟೋಬರ್ 2021 (16:43 IST)
ದಸರಾ ಹಬ್ಬ ಮುಗಿದ ತಕ್ಷಣ ರಾಜ್ಯದಲ್ಲಿ ಪ್ರಾಥಮಿಕ ಅಂದ್ರೆ 1 ರಿಂದ 5ನೇ ತರಗತಿ(1st to 5th Class)ಗಳನ್ನ ಆರಂಭಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ 
ಹೇಳಿದ್ದಾರೆ.
 
ಉಡುಪಿಯಲ್ಲಿ ಈ ಕುರಿತು ಮಾತನಾಡಿದ ಸಚಿವರು, 'ಹಲವು ಜಿಲ್ಲೆಗಳಲ್ಲಿ ಕೋವಿಡ್‌ ಪಾಸಿಟಿವಿಟಿ ದರ ಶೂನ್ಯವಿದೆ.
 
ಶಾಲೆ ಆರಂಭಿಸಬಹುದೆಂದು ತಜ್ಞರು ಅಭಿಪ್ರಾಯ ನೀಡಿದ್ದಾರೆ. ಮುಖ್ಯಮಂತ್ರಿಗಳು ಕೂಡ ಶಾಲೆಗಳ ಆರಂಭಕ್ಕೆ ಆಸಕ್ತಿ ತೋರಿದ್ದಾರೆ. ಹಾಗಾಗಿ ದಸರಾ ಮುಗಿದ ತಕ್ಷಣ ಶಾಲೆಗಳು ಆರಂಭ ಮಾಡುತ್ತೇವೆ' ಎಂದರು.
 
ಇನ್ನು 'ಈಗಿರುವಂತೆ ಆಗಲೂ ಶಾಲೆಗಳಲ್ಲಿ ಕಡ್ಡಾಯ ಹಾಜರಾತಿ ಇರುವುದಿಲ್ಲ. ಆನ್‌ಲೈನ್‌ ಮತ್ತು ಆಫ್‌ಲೈನ್‌ ಎರಡು ಕ್ಲಾಸ್‌ಗಳು ನಡೆಯುತ್ವೆ. ಇಚ್ಛೆಯಿದ್ದವರು ತರಗತಿಗಳಿಗೆ ಹಾಜರಾಗಬಹುದು ಎಂದರು. ಇನ್ನು ಇದೇ ವೇಳೆ ಸಧ್ಯ ಗ್ರಾಮೀಣ ಭಾಗದಲ್ಲಿ ಹೈಸ್ಕೂಲ್‌ ಹಾಜರಾತಿ ಶೇ.90ರಷ್ಟಿದೆ' ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೊಳಗೇರಿ ಹಾಗೂ ವಲಸಿಗರ ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಮನೆ ಬಾಗಿಲಿಗೆ ಶಾಲೆ