Select Your Language

Notifications

webdunia
webdunia
webdunia
webdunia

ಶಿಕ್ಷಕನ ಹೊಡೆತಕ್ಕೆ ಎಂಟು ವರ್ಷದ ವಿದ್ಯಾರ್ಥಿ ಬಲಿ

ಶಿಕ್ಷಕನ ಹೊಡೆತಕ್ಕೆ ಎಂಟು ವರ್ಷದ ವಿದ್ಯಾರ್ಥಿ ಬಲಿ
ಉತ್ತರಪ್ರದೇಶ , ಮಂಗಳವಾರ, 23 ಅಕ್ಟೋಬರ್ 2018 (09:55 IST)
ಉತ್ತರ ಪ್ರದೇಶ : ವಿದ್ಯಾರ್ಥಿಗಳು ತಪ್ಪು ಮಾಡುವುದು ಸಹಜ. ಆದರೆ ಅದಕ್ಕಾಗಿ ಶಿಕ್ಷಕರು ಅವರಿಗೆ ಸಾಯುವ ರೀತಿ ಹೊಡೆಯುವುದು ಯಾವ ನ್ಯಾಯ ಹೇಳಿ. ಇಂತಹದೊಂದು ಅಮಾನವೀಯ ಘಟನೆ ಉತ್ತರಪ್ರದೇಶದಲ್ಲಿನ ಬಾಂದ್ರಾ ಜಿಲ್ಲೆಯಲ್ಲಿನ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.


ಉತ್ತರಪ್ರದೇಶದಲ್ಲಿನ ಬಾಂದ್ರಾ ಜಿಲ್ಲೆಯ ಸದಿಮದನಾಪುಟ್‍ ನ ಶಾಲೆಯ ಶಿಕ್ಷಕ ಜೈರಾಜ್ ಎಂಬಾತ ಮಂಗಳವಾರ ಎಂಟು ವರ್ಷದ ವಿದ್ಯಾರ್ಥಿ ಅರ್ಬಾಜ್‍ ಗೆ ಥಳಿಸಿದ್ದಾನೆ. ತೀವ್ರ ಗಾಯಗೊಂಡ ವಿದ್ಯಾರ್ಥಿಯನ್ನು ಬಳಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವಿದ್ಯಾರ್ಥಿ ಶುಕ್ರವಾರ ಮೃತಪಟ್ಟಿದ್ದಾನೆ.


ಈ ಸಂಬಂಧ ಬಾಲಕನ ಮನೆಯವರು ಶಿಕ್ಷಕನ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆಯ ಸತ್ಯಾಸತ್ಯತೆ ತಿಳಿಯಲು ತನಿಖೆ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ವರನಿಗೆ ತಕ್ಕ ಪಾಠ ಕಲಿಸಿದ ವಧು