Publish Date: Tue, 23 Oct 2018 (09:52 IST)
Updated Date: Tue, 23 Oct 2018 (09:54 IST)
ಲಕ್ನೋ: ವರದಕ್ಷಿಣೆ ನೀಡುವಂತೆ ಪೀಡಿಸುತ್ತಿದ್ದ ವರ ಮತ್ತು ಆತನ ಮನೆಯವರಿಗೆ ವಧುವೇ ತಕ್ಕ ಪಾಠ ಕಲಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಭಾವೀ ಪತಿ ಮತ್ತು ಆತನ ಸಹೋದರ, ತಂದೆಯ ತಲೆಯನ್ನು ಅರ್ಧ ಕೂದಲು ಕತ್ತರಿಸಿ ವಧು ‘ಸಾಹಸ’ ತೋರಿದ್ದಾಳೆ.
ವಧುವಿನ ಈ ಕೃತ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವರು ವಧುವಿನ ಧೈರ್ಯ ಕೊಂಡಾಡಿದರೆ ಇನ್ನು ಕೆಲವರು ವರದಕ್ಷಿಣೆ ಕೇಳಿದ್ದ ವರನಿಗೆ ಛೀಮಾರಿ ಹಾಕಿದ್ದಾರೆ. ಮದುವೆಗೆ ಐದು ದಿನವಿರುವಾಗ ವರನ ಕಡೆಯವರು ಹೊಸ ಹೊಸ ಬೇಡಿಕೆ ಇಟ್ಟಿದ್ದರು. ಈಡೇರಿಸದೇ ಇದ್ದರೆ ಮದುವೆ ಮುರಿಯುವುದಾಗಿ ಬೆದರಿಕೆ ಹಾಕಿದ್ದರು ಎಂದು ವಧುವಿನ ಕಡೆಯವರು ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಈ ಸಂಬಂಧ ಪೊಲೀಸರಿಗೆ ದೂರನ್ನೂ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.