Publish Date: Sun, 21 Oct 2018 (08:58 IST)
Updated Date: Sun, 21 Oct 2018 (09:03 IST)
ಉತ್ತರ ಪ್ರದೇಶ : ಕಟ್ಟಿಗೆ ಸಂಗ್ರಹಿಸುತ್ತಿದ್ದ ವ್ಯಕ್ತಿಯ ಮೇಲೆ ಕೋತಿಗಳು ಇಟ್ಟಿಗೆ ಕಲ್ಲು ಎಸೆದು ದಾಳಿ ಮಾಡಿದ ಪರಿಣಾಮ ಆತ ಸಾವನಪ್ಪಿದ ಘಟನೆ ಉತ್ತರ ಪ್ರದೇಶದ ಬಾಘಪತ್ ನ ಟಿಕ್ರಿ ಪ್ರದೇಶದಲ್ಲಿ ನಡೆದಿದೆ.
ಧರ್ಮಪಾಲ್ ಸಿಂಗ್(72) ಕೋತಿಗಳ ದಾಳಿಗೆ ಬಲಿಯಾದ ವ್ಯಕ್ತಿ. ಈತ ಒಣ ಕಟ್ಟಿಗೆಯ ತುಂಡುಗಳನ್ನು ಸಂಗ್ರಹಿಸುತ್ತಿರುವಾಗ ಕೋತಿಗಳು ಆತನ ಮೇಲೆ ಸುಮಾರು 20 ಇಟ್ಟಿಗೆಯ ತುಂಡುಗಳನ್ನು ಎಸೆದಿವೆ. ಅವುಗಳು ಎಸೆದ ರಭಸಕ್ಕೆ ಧರ್ಮಪಾಲ್ ಸಿಂಗ್ ನ ತಲೆ ಮತ್ತು ಎದೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.
ಈ ಘಟನೆ ಕುರಿತು ಧರ್ಮಪಾಲ್ ಸಿಂಗ್ ಅವರ ಕುಟುಂಬಸ್ಥರು ಕೋತಿಗಳ ಮೇಲೆ ದೂರು ದಾಖಲಿಸಲು ಪೊಲೀಸ್ ಠಾಣೆಗೆ ಬಂದಾಗ ಇದು ಅಪಹಾಸ್ಯಕ್ಕೆ ದಾರಿ ಮಾಡಿ ಕೊಡುತ್ತದೆ ಎಂದು ಪೊಲೀಸರು ಅದನ್ನು ಆಕಸ್ಮಿಕ ಘಟನೆ ಎಂದು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.
ಈಗಾಗಲೇ ಕೋತಿಗಳ ಹಾವಳಿಯಿಂದ ಕಂಗೆಟ್ಟ ಕುಟುಂಬಸ್ಥರು ಪೊಲೀಸರ ವರ್ತನೆಯಿಂದ ಕೋಪಗೊಂಡು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.