Select Your Language

Notifications

webdunia
webdunia
webdunia
webdunia

ಮಕ್ಕಳ ಸ್ನೇಹಿ ಪೊಲೀಸ್ ಠಾಣೆ ಆರಂಭ

ಮಕ್ಕಳ ಸ್ನೇಹಿ ಪೊಲೀಸ್ ಠಾಣೆ ಆರಂಭ
ಒಡಿಶಾ , ಬುಧವಾರ, 27 ಅಕ್ಟೋಬರ್ 2021 (10:53 IST)
ಒಡಿಶಾ :  ಸಿಎಂ ನವೀನ್ ಪಟ್ನಾಯಕ್ ರಾಜ್ಯದ ಮಕ್ಕಳಿಗಾಗಿ ವಿಶೇಷ ಪೊಲೀಸ್ ಠಾಣೆಗಳನ್ನ ತೆರೆಯಲು ಮುಂದಾಗಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಒಟ್ಟು 34 ಮಕ್ಕಳ ಸ್ನೇಹಿ ಪೊಲೀಸ್ ಠಾಣೆ ಆರಂಭವಾಗಲಿದೆ ಅಂತ ನವೀನ್ ಪಟ್ನಾಯಕ್ ಘೋಷಿಸಿದ್ದಾರೆ. ಈ ಪೊಲೀಸ್ ಠಾಣೆಗಳಲ್ಲಿ ಪುಸ್ತಕಗಳು, ನಿಯತಕಾಲಿಕೆಗಳು ಮತ್ತು ಪತ್ರಿಕೆಗಳು, ಹಾಸಿಗೆಗಳು, ಕುರ್ಚಿಗಳು ಮತ್ತು ಟೇಬಲ್ಗಳು ಇರಲಿದ್ದು, ಗ್ರಂಥಾಲಯ ಸೇರಿದಂತೆ ಮಕ್ಕಳಿಗಾಗಿ ವಿಶೇಷ ಸೌಲಭ್ಯಗಳು ಇರಲಿವೆ ಅಂತ ತಿಳಿಸಿದ್ದಾರೆ. ಜೊತೆಗೆ ಮಕ್ಕಳ ಹಕ್ಕುಗಳ ಪ್ರದರ್ಶನ ಫಲಕಗಳು ಈ ಪೊಲೀಸ್ ಠಾಣೆಯಲ್ಲಿ ಲಭ್ಯವಿರಲಿದ್ದು, ಮಕ್ಕಳ ಕಲ್ಯಾಣ ಅಧಿಕಾರಿಗಳ ಸಂಪರ್ಕ ಸಂಖ್ಯೆಗಳ ಮಾಹಿತಿಯನ್ನ ಅಳವಡಿಸಲಾಗುತ್ತೆ. ಮಕ್ಕಳ ಸ್ನೇಹಿ ಪೊಲೀಸ್ ಠಾಣೆಯಲ್ಲಿ ಆಟಿಕೆಗಳು ಮತ್ತು ಪ್ರಥಮ ಚಿಕಿತ್ಸಾ ಕಿಟ್ಗಳನ್ನ ಸಹ ಇರಿಸಲಾಗುತ್ತೆ ಅಂತ ಸಿಎಂ ಪಟ್ನಾಯಕ್ ಮಾಹಿತಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೆಗಸಸ್ ತನಿಖೆ: ಇಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ