Select Your Language

Notifications

webdunia
webdunia
webdunia
webdunia

ಎಲೆಕ್ಟ್ರಾನಿಕ್ ವಾಕಿ ಟಾಕಿ ಕದ್ದಿರುವ ಸಂಬಂಧ ಎಸ್ ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್

webdunia
bangalore , ಭಾನುವಾರ, 3 ಅಕ್ಟೋಬರ್ 2021 (22:00 IST)
ಬೆಂಗಳೂರು: ಮಹಾನಗರದಲ್ಲಿ ಸೆ. 27 ರಂದು ಸೋಮವಾರ ಕೃಷಿ ಕಾಯ್ದೆ ವಿರೋಧಿಸಿ ಭಾರತ್ ಬಂದ್ ವೇಳೆ ಕಾರ್ಯನಿರ್ವಹಿಸುತ್ತಿರುವ ಇನ್ಸ್ ಪೆಕ್ಟರ್ ಒಬ್ಬರ ಎಲೆಕ್ಟ್ರಾನಿಕ್ ವಾಕಿ ಟಾಕಿ ಕದ್ದಿರುವ ಸಂಬಂಧ ಎಸ್ ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಬೆಂಗಳೂರಿನಲ್ಲಿ ಭಾರತ್ ಬಂದ್ ಗೆ ಕರೆ ನೀಡಲಾಗುತ್ತಿದೆ. ಈ ವೇಳೆ ಕರ್ತವ್ಯದಲ್ಲಿದ್ದ ಇನ್ಸ್ ಪೆಕ್ಟರ್ ಶಿವಕುಮಾರ್ ಪ್ರತಿಭಟನಾಕಾರರನ್ನು ನಿಯಂತ್ರಿಸುವ ಸಮಯದಲ್ಲಿ ತಮ್ಮ ಬಳಿ ಇದ್ದ ಎಲೆಕ್ಟ್ರಾನಿಕ್ ವಾಕಿ ಟಾಕಿಯನ್ನು ಕಳೆದುಕೊಂಡಿದ್ದಾರೆ. 
ಟೌನ್ ಹಾಲ್ ಮುಂಭಾಗ ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಗಳು ಸೇರಿದ್ದವು. ರಸ್ತೆ ತಡೆಗೆ ಮುಂದಾದ ಸಂಘಟನೆಗಳ ಗುಂಪನ್ನು ತಡೆಯಲು ಮತ್ತು ಕಂಟ್ರೋಲ್ ರೂಮ್ ಗೆ ಮಾಹಿತಿ ನೀಡುವುದು, ಬೆಲ್ಟ್ ಗೆ ಸಿಕ್ಕಿದ ವಾಕಿಟಾಕಿ ತೆಗೆಯುವಿಕೆ ಮಂದಾದಾಗ ವಾಕಿಟಾಕಿ ಕಳವಳಗೊಳ್ಳುವುದು ಇನ್ಸ್ ಪೆಕ್ಟರ್ ಶಿವಕುಮಾರ್ ಗೆ ಗೊತ್ತಾಗಿದೆ. ಅಷ್ಟರಲ್ಲಿ ಕಳ್ಳ ತನ್ನ ಕೈ ಚಳಕ ತೋರಿಸಿದ್ದ. 
ಸದ್ಯ ಈ ಕುರಿತು ಇನ್ಸ್ ಪೆಕ್ಟರ್ ಶಿವಕುಮಾರ್ ಎಸ್ ಜೆ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್ ಐಆರ್ ದಾಖಲಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ