Select Your Language

Notifications

webdunia
webdunia
webdunia
webdunia

ಆರ್ಬಿಐನ ಡಿಜಿಟಲ್ ಕರೆನ್ಸಿ ಶೀಘ್ರ ಬಿಡುಗಡೆ

ಆರ್ಬಿಐನ ಡಿಜಿಟಲ್ ಕರೆನ್ಸಿ ಶೀಘ್ರ ಬಿಡುಗಡೆ
ನವದೆಹಲಿ , ಶುಕ್ರವಾರ, 23 ಜುಲೈ 2021 (08:58 IST)
ನವದೆಹಲಿ (ಜು.23): ಬಿಟ್ಕಾಯಿನ್ ಕ್ರಿಪ್ಟೋಕರೆನ್ಸಿ ಮಾದರಿಯಲ್ಲಿ ನಮ್ಮದೇ ಆದೇ ಆದ ಡಿಜಿಟಲ್ ಕರೆನ್ಸಿ ಜಾರಿಗೊಳಿಸುವ ನಿಟ್ಟಿನಿಂದ ಕಾರ್ಯನಿರ್ವಹಿಸುತ್ತಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಗೊಳಿಸುವುದಾಗಿ ಅದು ಹೇಳಿದೆ.


•             ಆರ್ಬಿಐನ ಡಿಜಿಟಲ್ ಕರೆನ್ಸಿ ಶೀಘ್ರ ಬಿಡುಗಡೆ
•             ಬಿಟ್ಕಾಯಿನ್ ಕ್ರಿಪ್ಟೋಕರೆನ್ಸಿ ಮಾದರಿಯಲ್ಲಿ ನಮ್ಮದೇ ಆದೇ ಆದ ಡಿಜಿಟಲ್ ಕರೆನ್ಸಿ
•             ಮುಂದಿನ ದಿನಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಗೊಳಿಸುವುದಾಗಿ ಹೇಳಿದೆ.

ಈ ಕುರಿತು ಮಾಹಿತಿ ನೀಡಿರುವ ಆರ್ಬಿಐನ ಉಪ ಗವರ್ನರ್ ಟಿ.ರವಿಶಂಕರ್, ‘ವಿಶ್ವದ ಬಹುತೇಕ ದೇಶಗಳ ಕೇಂದ್ರೀಯ ಬ್ಯಾಂಕ್ಗಳು ತಮ್ಮದೇ ಆದ ಡಿಜಿಟಲ್ ಕರೆನ್ಸಿ ಬಿಡುಗಡೆ ಪ್ರಕ್ರಿಯೆಯಲ್ಲಿವೆ. ಆರ್ಬಿಐ ಕೂಡಾ ಅದೇ ದಿಕ್ಕಿನಲ್ಲಿ ಹೆಜ್ಜೆ ಇಡುತ್ತಿದೆ. ಹಂತ ಹಂತವಾಗಿ ಕ್ರಿಪ್ಟೋಕರೆನ್ಸಿ ಜಾರಿಗೊಳಿಸಲು ಮತ್ತು ಅದನ್ನು ಭವಿಷ್ಯದಲ್ಲಿ ಚಿಲ್ಲರೆ ಮತ್ತು ಸಗಟು ವ್ಯಾಪಾರ ಕ್ಷೇತ್ರದಲ್ಲಿ ಬಿಡುಗಡೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ನಿಯಮ ಉಲ್ಲಂಘಿಸಿದ ಮಾಸ್ಟರ್ಕಾರ್ಡ್ಗೆ RBI ನಿರ್ಬಂಧ; ಜುಲೈ 22 ರಿಂದ ಆದೇಶ ಜಾರಿ!
ಖಾಸಗಿ ಕ್ರಿಪ್ಟೋಕರೆನ್ಸಿಗಳಿಗೆ ಹೋಲಿಸಿದರೆ ಕೇಂದ್ರೀಯ ಬ್ಯಾಂಕ್ಗಳು ಬಿಡುಗಡೆ ಮಾಡುವ ಡಿಜಿಟಲ್ ಕರೆನ್ಸಿ, ಅಸಹಜ ಏರಿಳಿಕೆಯಿಂದ ರಕ್ಷಣೆ ನೀಡುತ್ತದೆ. ಡಿಜಿಟಲ್ ಕರೆನ್ಸಿ ಬಳಕೆಯು, ನೋಟುಗಳ ಮೇಲಿನ ಅವಲಂಬನೆ ಕಡಿಮೆ ಮಾಡುತ್ತದೆ, ನಿರ್ವವಣಾ ವೆಚ್ಚ, ಮುದ್ರಣಾ ವೆಚ್ಚ ಉಳಿಸುತ್ತದೆ ಜೊತೆಗೆ ಸೆಟಲ್ಮೆಂಟ್ ಅಪಾಯವನ್ನೂ ಕಡಿಮೆ ಮಾಡುತ್ತದೆ ಎಂದು ರವಿಶಂಕರ್ ಹೇಳಿದ್ದಾರೆ


Share this Story:

Follow Webdunia kannada

ಮುಂದಿನ ಸುದ್ದಿ

ಲಾರೀಲಿ ಮಹಿಳೆಯ ರುಂಡ ಪತ್ತೆ..!