Select Your Language

Notifications

webdunia
webdunia
webdunia
webdunia

ಕೊರೋನಾ 2ನೇ ಅಲೆ; ಎಪ್ರಿಲ್-ಮೇ ಅವಧಿಯಲ್ಲಿ 645 ಮಕ್ಕಳು ತಬ್ಬಲಿ!

ಕೊರೋನಾ 2ನೇ ಅಲೆ; ಎಪ್ರಿಲ್-ಮೇ ಅವಧಿಯಲ್ಲಿ 645 ಮಕ್ಕಳು ತಬ್ಬಲಿ!
ನವದೆಹಲಿ , ಗುರುವಾರ, 22 ಜುಲೈ 2021 (20:53 IST)
ನವದೆಹಲಿ(ಜು.22): ಕೊರೋನಾ 2ನೇ ಅಲೆ ಭೀಕರತೆ ಕುರಿತು ಬಹುತೇಕ ಎಲ್ಲರೂ ಅನುಭವಿಸಿದ್ದಾರೆ. ಸದ್ಯ ಕೊರೋನಾ ಅಲೆ ತಗ್ಗಿದರೂ ಆತಂಕ ಅಂತ್ಯಗೊಂಡಿಲ್ಲ. ಈ 2ನೇ ಅಲೆಯಿಂದ ಸಂಭವಿಸಿದ ನಷ್ಟಗಳು ಭರಿಸಲು ಸಾಧ್ಯವಿಲ್ಲ.



•             ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವಾಲಯದ ವರದಿ
•             ಒಂದು ತಿಂಗಳಲ್ಲಿ 645 ಮಕ್ಕಳ ಪೋಷಕರು ಕೊರೋನಾಗೆ ಬಲಿ
•             ರಾಜ್ಯಸಭೆಯಲ್ಲಿ ಸ್ಮೃತಿ ಇರಾನಿ ತೆರೆದಿಟ್ಟ ಅಂಕಿ ಅಂಶ

ಆರ್ಥಿಕ ನಷ್ಟಗಳನ್ನು ಸರಿದೂಗಿಸಬಹುದು. ಆದರೆ ಈ ಕೊರೋನಾದಿಂದ ತಬ್ಬಲಿಗಳಾದ ಮಕ್ಕಳ ಅಳಲು ಈಗಲೂ ಮನಸ್ಸು ಕದಡುವಂತಿದೆ. ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿ ಹಂಚಿಕೊಂಡ ಮಾಹಿತಿ ನಿಜಕ್ಕೂ ಮನಕಲುಕುವಂತಿದೆ.
ಭಾರತದ ಕೊರೋನಾ ಸಾವು 4 ಲಕ್ಷ ಅಲ್ಲ, 30 ಲಕ್ಷ: ಅಧ್ಯಯನ ವರದಿ!
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದ್ಕಕೆ ಉತ್ತರಿಸುತ್ತಾ ಸ್ಮೃತಿ ಇರಾನಿ, ಕೊರೋನಾ 2ನೇ ಅಲೆಯ ಒಂದು ತಿಂಗಳ ಅವಧಿಯಲ್ಲಿ ಬರೋಬ್ಬರಿ 645 ಮಕ್ಕಳು ಪೋಷಕರ ಕಳೆದುಕೊಂಡು ತಬ್ಬಲಿಗಳಾಗಿದ್ದಾರೆ. ಈ ವರ್ಷದ ಎಪ್ರಿಲ್ನಿಂದ ಮೇ ತಿಂಗಳ ಅವಧಿಯ ಈ ಅಂಕಿ ಅಂಶ ಎಲ್ಲರನ್ನೂ ನೋಯಿಸಿದೆ.
ರಾಜ್ಯಕ್ಕೆ ಕಡಿಮೆ ಕೋವಿಡ್ ಸಾವು ತೋರಿಸಲು ಕೇಂದ್ರ ಹೇಳಿಲ್ಲ; ಆರೋಪಕ್ಕೆ ಆರೋಗ್ಯ ಸಚಿವರ ತಿರುಗೇಟು!
ಕೊರೋನಾದಿಂದ ತಬ್ಬಲಿಗಳಾದ ಮಕ್ಕಳ ಪೈಕಿ ಉತ್ತರ ಪ್ರದೇಶದಲ್ಲಿ ಹೆಚ್ಚು. ಉತ್ತರ ಪ್ರದೇಶದಲ್ಲಿ 158 ಮಕ್ಕಳು ಪೋಷಕರನ್ನು ಕಳೆದುಕೊಂಡು ತಬ್ಬಲಿಗಳಾಗಿದ್ದಾರೆ. ಇನ್ನು ಆಂಧ್ರ ಪ್ರದೇಶದಲ್ಲಿ 119 ಮಕ್ಕಳು, ಮಹಾರಾಷ್ಟ್ರದಲ್ಲಿ 83 ಮಕ್ಕಳು, ಮಧ್ಯ ಪ್ರದೇಶದಲ್ಲಿ 73 ಮಕ್ಕಳು ಪೋಷಕರ ಕಳೆದುಕೊಂಡು ತಬ್ಬಲಿಗಳಾಗಿದ್ದಾರೆ.
ಈ ನಾಲ್ಕು ರಾಜ್ಯಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಮಕ್ಕಳು ಅನಾಥರಾಗಿದ್ದಾರೆ. ಇನ್ನುಳಿದ ರಾಜ್ಯಗಳಲ್ಲಿ ಪ್ರಮಾಣ ಕಡಿಮೆಯಾದರೂ ತುಂಬಲಾರದ ನಷ್ಟವೇ ಸರಿ


Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಕರ್ ಯೋಗಕ್ಷೇಮ ವಿಚಾರಿಸಿದ ಸಿದ್ದರಾಮಯ್ಯ, ಡಿಕೆಶಿ