Select Your Language

Notifications

webdunia
webdunia
webdunia
webdunia

ಆರ್ಬಿಐ Mastercard Ban ಮಾಡಿದ್ದು ಯಾಕೆ? ಯಾವ ನಿಯಮಗಳನ್ನು ಇದು ಉಲ್ಲಂಘಿಸಿದೆ ?

ಆರ್ಬಿಐ Mastercard Ban ಮಾಡಿದ್ದು ಯಾಕೆ? ಯಾವ ನಿಯಮಗಳನ್ನು ಇದು ಉಲ್ಲಂಘಿಸಿದೆ ?
ನವದೆಹಲಿ , ಭಾನುವಾರ, 18 ಜುಲೈ 2021 (16:41 IST)
Reserve Bank Of India : ಭಾರತೀಯ ರಿಸರ್ವ್ ಬ್ಯಾಂಕ್ ಖ್ಯಾತ ಹಣಕಾಸು ಸಂಸ್ಥೆ ಮಾಸ್ಟರ್ ಕಾರ್ಡ್ಗೆ ಶಾಕ್ ನೀಡಿದ್ದು ಗ್ರಾಹಕರ ಡೇಟಾವನ್ನು ಸಂಗ್ರಹಿಸುವ ನಿಯಮಗಳನ್ನು ಉಲ್ಲಂಘನೆ ನಡೆಸಿದ್ದಕ್ಕಾಗಿ ಪಾವತಿ ವ್ಯವಸ್ಥೆ ಆಪರೇಟರ್ ಮಾಸ್ಟರ್ಕಾರ್ಡ್ ವಿರುದ್ಧ ಆರ್ಬಿಐ ನಿಷೇಧ ಹೇರಿದೆ.


ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆಯನ್ನು ಸಂಸತ್ತು ಪರಿಶೀಲಿಸುತ್ತಿದೆ. ಡೇಟಾವನ್ನು ಈಗ ಅಮೂಲ್ಯ ಸರಕು ಎಂದು ಪರಿಗಣಿಸಲಾಗಿದೆ, ಮತ್ತು ದೇಶಗಳು ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ಹೆಚ್ಚು ಹಿಂಜರಿಯುತ್ತಿವೆ.ಮಾಸ್ಟರ್ ಕಾರ್ಡ್ಗೆ ಏಕೆ ದಂಡ ವಿಧಿಸಲಾಯಿತು? ಮುಂದಿನ ಪರಿಸ್ಥಿತಿ ಏನು ಎಂಬುದನ್ನು ತಿಳಿಯೋಣ.

ಆರ್ಬಿಐ ಸುತ್ತೋಲೆ ಏನು?
ಏಪ್ರಿಲ್ 2018 ರಲ್ಲಿ, ಕೇಂದ್ರ ಬ್ಯಾಂಕ್ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪಾವತಿ ವ್ಯವಸ್ಥೆ ಪೂರೈಕೆದಾರರಿಗೆ ಅವುಗಳು ನಿರ್ವಹಿಸುವ ಪಾವತಿ ವ್ಯವಸ್ಥೆಗಳ ಸಂಪೂರ್ಣ ಡೇಟಾವನ್ನು ಭಾರತದ ವ್ಯವಸ್ಥೆಯಲ್ಲಿ ಸಂಗ್ರಹಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಕೇಳಿದೆ. ಆರ್ಬಿಐ ದೇಶದಲ್ಲಿರುವ ಪಾವತಿ ವ್ಯವಸ್ಥೆಯಲ್ಲಿ ಗಣನೀಯ ಬೆಳವಣಿಗೆಯನ್ನು ಗಮನಿಸಿದೆ, ಆದರೆ ಎಲ್ಲಾ ವ್ಯವಸ್ಥೆ ಪೂರೈಕೆದಾರರು ಭಾರತದಲ್ಲಿ ಪಾವತಿ ಡೇಟಾವನ್ನು ಸಂಗ್ರಹಿಸುವುದಿಲ್ಲ ಎಂಬುದನ್ನು ಪತ್ತೆಹಚ್ಚಿದೆ.
ಅಂತಹ "ಹೆಚ್ಚು ತಂತ್ರಜ್ಞಾನ ಅವಲಂಬಿತ" ವ್ಯವಸ್ಥೆಗಳು"ಸುರಕ್ಷತೆ ಮತ್ತು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿರುತ್ತದೆ ಅದೂ ಕೂಡ ಅತ್ಯುತ್ತಮ ದರ್ಜೆಯ ಸುರಕ್ಷತಾ ಕ್ರಮಗಳಾಗಿರಬೇಕೆಂದು ಆರ್ಬಿಐ ತಿಳಿಸಿದೆ. ಡೇಟಾವನ್ನು ಭಾರತದಲ್ಲಿ ಮಾತ್ರವೇ ಸಂಗ್ರಹಿಸಬೇಕೆಂದು ಆರ್ಬಿಐ ಹೇಳಿದ್ದು ಪೂರ್ಣ ಪ್ರಮಾಣ ಎಂಡ್-ಟು ಎಂಡ್ ಡಿಸ್ಕ್ರಪ್ಶನ್ ಅನ್ನು ಒಳಗೊಂಡಿರಬೇಕು ಎಂಬುದನ್ನು ತಿಳಿಸಿತ್ತು. ಈ ಮಾಹಿತಿಯು ಸಂಗ್ರಹಿಸಿದ ಮಾಹಿತಿ/ಸಾಗಿಸಿದ/ಸಂದೇಶದ ಭಾಗವಾಗಿ ಸಂಸ್ಕರಿಸಿದ/ಪಾವತಿ ಸೂಚನೆ ಹೀಗೆ ಎಲ್ಲಾ ವಿವರಗಳನ್ನು ಒಳಗೊಂಡಿರಬೇಕು ಎಂದು ತಿಳಿಸಿದೆ.
ಭಾರತದ ವೈಯಕ್ತಿಕ ಡೇಟಾ ಸಂರಕ್ಷಣೆ ಮಸೂದೆ ಏನು ಹೇಳುತ್ತದೆ?
2019 ರ ಕೊನೆಯಲ್ಲಿ, ಕೇಂದ್ರವು ವೈಯಕ್ತಿಕ ಡೇಟಾ ಸಂರಕ್ಷಣೆ (ಪಿಡಿಪಿ) ಮಸೂದೆಯನ್ನು ಸಂಸತ್ತಿಗೆ ಸಲ್ಲಿಸಿತು, ಈ ಮಸೂದೆಯು ಸರ್ಕಾರವು ವೈಯಕ್ತಿಕ ಡೇಟಾವನ್ನು ಸಂಸ್ಕರಿಸುವುದನ್ನು, ಭಾರತದಲ್ಲಿ ಸಂಯೋಜಿತ ಕಂಪನಿಗಳು ಮತ್ತು ಭಾರತೀಯರ ವೈಯಕ್ತಿಕ ಡೇಟಾವನ್ನು ಸಂಸ್ಕರಿಸುವ ವಿದೇಶಿ ಕಂಪನಿಗಳನ್ನು ನಿಯಂತ್ರಿಸುತ್ತದೆ. ಈ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಯು ಪರಿಶೀಲಿಸುತ್ತಿದೆ ಮತ್ತು ಭಾರತದಲ್ಲಿ ದತ್ತಾಂಶ ನಿಯಮಗಳ ಮೇಲ್ವಿಚಾರಣೆಗೆ ದತ್ತಾಂಶ ಸಂರಕ್ಷಣಾ ಸಂಸ್ಥೆಯನ್ನು ಸ್ಥಾಪಿಸಲು ಮಸೂದೆಯು ಪ್ರಸ್ತಾಪಿಸಿದೆ. ಮಸೂದೆ ಹೇಳುವಂತೆ ಹಣಕಾಸಿನ ಮಾಹಿತಿಯು ಸೂಕ್ಷ್ಮ ವೈಯಕ್ತಿಕ ಡೇಟಾವಾಗಿದ್ದು ಅದರ ಸಂರಕ್ಷಣೆಯು ಅಗತ್ಯ ಎಂದು ಹೇಳಿದೆ.
ಬೇರೆ ದೇಶಗಳು ಏನು ಕ್ರಮ ಕೈಗೊಂಡಿವೆ?
ಡೇಟಾ ಎಂಬುದು ಈಗ ಹೊಸ ಸಂಪನ್ಮೂ ಎಂದೆನಿಸಿದ್ದು ನಾಗರೀಕರ ಅಥವಾ ಗ್ರಾಹಕರ ವಿವರಗಳ ಮಾಹಿತಿ ಪಡೆಯುವುದು ಡಿಜಿಟಲ್ ಕ್ರಾಂತಿಯಲ್ಲಿ ಪ್ರಮುಖ ಅನುಕೂಲವಾಗಿ ಪರಿಗಣಿತವಾಗಿದೆ. “ಡೇಟಾ ನೀತಿ’’ ಕಾನೂನಿನ ಅನ್ವಯದಂತೆ ಹೆಚ್ಚಿನ ದೇಶಗಳು ಡೇಟಾ ಸಂರಕ್ಷಣೆಯನ್ನು ಮಾಡುವ ಸಲುವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ನೀತಿಗಳನ್ನು ಜಾರಿಗೆ ತಂದಿವೆ. ಆದ್ದರಿಂದ, ರಷ್ಯಾ, ಚೀನಾ, ಜರ್ಮನಿ, ಫ್ರಾನ್ಸ್, ಇಂಡೋನೇಷ್ಯಾ ಮತ್ತು ವಿಯೆಟ್ನಾಂ ಮುಂತಾದ ದೇಶಗಳು ತಮ್ಮ ನಾಗರಿಕರ ಡೇಟಾವನ್ನು ಆ ದೇಶದ ಗಡಿಯೊಳಗಿನ ಭೌತಿಕ ಸರ್ವರ್ಗಳಲ್ಲಿ ಸಂಗ್ರಹಿಸಬೇಕೆಂದು ಕಾನೂನುಗಳನ್ನು ಜಾರಿಗೆ ತಂದಿವೆ


Share this Story:

Follow Webdunia kannada

ಮುಂದಿನ ಸುದ್ದಿ

ಕೇರಳದಲ್ಲಿ ಕೋವಿಡ್ ನಿಯಮ ಸಡಿಲಿಕೆ, ಶಬರಿಮಲೆಗೆ ಹೋಗಲು ಯಾವೆಲ್ಲಾ ದಾಖಲೆ ಬೇಕು ?