ಬೆಂಗಳೂರು : ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯಾದ್ಯಂತ ಶುಕ್ರವಾರದಿಂದ ರಂಜಾನ್ ಉಪವಾಸ ವೃತ ಆಚರಣೆ ಆರಂಭವಾಗಲಿದೆ.
ಬೆಂಗಳೂರಿನಲ್ಲಿ ವಕ್ಫ್ ಕಚೇರಿಯಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರನ್ನು ಒಳಗೊಂಡ ರಾಜ್ಯ ಮೂನ್ ಕಮಿಟಿ (ಹಿಲಾಲ್ ಕಮಿಟಿ) ಯಲ್ಲಿ ಚರ್ಚಿಸಿ ಈ ತೀರ್ಮಾನ ಮಾಡಲಾಗಿದೆ.
ಇಸ್ಲಾಂ ಸಮುದಾಯದ ಅತಿದೊಡ್ಡ ಹಬ್ಬವಾದ ರಂಜಾನ್ ತಿಂಗಳಲ್ಲಿ ಹೆಚ್ಚಿನವರು ಉಪವಾಸ ಮಾಡುತ್ತಾರೆ. ಇಸ್ಲಾಮಿಕ್ ಕ್ಯಾಲೆಂಡರ್ನ ಈ ಪವಿತ್ರ ತಿಂಗಳಲ್ಲಿ ದೇಶಾದ್ಯಂತ ಮುಸ್ಲಿಮರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುತ್ತಾರೆ.