Publish Date: Thu, 26 Jul 2018 (10:07 IST)
Updated Date: Thu, 26 Jul 2018 (10:08 IST)
ನವದೆಹಲಿ: ಸಂಸತ್ತಿನಲ್ಲಿ ಪ್ರಧಾನಿ ಮೋದಿಯನ್ನು ತಬ್ಬಿದ ನಂತರ ರಾಹುಲ್ ಗಾಂಧಿಯನ್ನು ಕಂಡರೆ ಬಿಜೆಪಿ ಸಂಸದರು ಮಾರು ದೂರ ಓಡುತ್ತಾರಂತೆ! ಹಾಗಂತ ಸ್ವತಃ ರಾಹುಲ್ ಗಾಂಧಿಯೇ ಹೇಳಿಕೊಂಡಿದ್ದಾರೆ.
ಬಿಜೆಪಿ ಸಂಸದರೊಂದಿಗೆ ರಾಜಕೀಯವಾಗಿ ಹಲವಾರು ವಿಚಾರಗಳಿಗೆ ವೈರುದ್ಯಗಳಿರಬಹುದು. ಆದರೆ ಅವರನ್ನು ನಾನು ಧ್ವೇಷಿಸಲ್ಲ. ಆದರೆ ಪ್ರಧಾನಿ ಮೋದಿಯನ್ನು ಅಪ್ಪಿಕೊಂಡ ಮೇಲೆ ಬಿಜೆಪಿ ಸಂಸದರು ನನ್ನ ನೋಡಿ ಎರಡು ಹೆಜ್ಜೆ ಹಿಂದೆ ಸರಿಯುತ್ತಾರೆ. ಎಲ್ಲಿ ಅವರನ್ನೂ ತಬ್ಬಿಕೊಳ್ಳುತ್ತೇನೋ, ತಬ್ಬಿಕೊಂಡರೆ ಮುಜುಗರವಾಗಬಹುದೇನೋ ಎಂಬ ಭಯ ಅವರಲ್ಲಿದೆ’ ಎಂದು ರಾಹುಲ್ ಹೇಳಿಕೊಂಡಿದ್ದಾರೆ.
‘ನನಗೆ ಎಲ್ ಕೆ ಅಡ್ವಾಣಿಯವರೊಂದಿಗೆ ರಾಜಕೀಯ ವಿಚಾರಗಳಿಗೆ ತತ್ವಗಳ ವಿಚಾರದಲ್ಲಿ ವಿರುದ್ಧ ಅಭಿಪ್ರಾಯಗಳಿರಬಹುದು. ಆದರೆ ಧ್ವೇಷಿಸಲು ಕಾರಣಗಳಿಲ್ಲ’ ಎಂದು ರಾಹುಲ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.