Publish Date: Wed, 25 Jul 2018 (09:59 IST)
Updated Date: Wed, 25 Jul 2018 (10:02 IST)
ನವದೆಹಲಿ: ಕಾಂಗ್ರೆಸ್ ಗೆದ್ದರೆ ತಾವೇ ಪ್ರಧಾನಿ ಅಭ್ಯರ್ಥಿ ಎನ್ನುತ್ತಿದ್ದ ರಾಹುಲ್ ಗಾಂಧಿ ಇದೀಗ ಪ್ರಧಾನಿ ರೇಸ್ ನಿಂದ ತುಸು ಹಿಂದೆ ಸರಿದಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ನಾಯಕತ್ವದಲ್ಲಿ ಕಾಂಗ್ರೆಸ್ ಬಹುಮತ ಗಳಿಸುವುದು ಕಷ್ಟ. ಮಿತ್ರ ಪಕ್ಷಗಳ ಸಹಾಯವಿಲ್ಲದೇ ಕಾಂಗ್ರೆಸ್ ಗೆಲ್ಲಲಾರದು. ಆದರೆ ರಾಹುಲ್ ಪ್ರಧಾನಿ ಅಭ್ಯರ್ಥಿಯಾಗುವುದು ಮಿತ್ರ ಪಕ್ಷಗಳಿಗೆ ಇಷ್ಟವಿಲ್ಲ.
ಬಿಎಸ್ ಪಿ, ತೃಣಮೂಲ ಕಾಂಗ್ರೆಸ್ ನಾಯಕಿಯರಿಗೆ ತಾವೇ ಪ್ರಧಾನಿ ಅಭ್ಯರ್ಥಿಯಾಗಬೇಕೆಂಬ ಮಹದಾಸೆಯಿದೆ. ಮಾಯಾವತಿ, ಮಮತಾ ಬ್ಯಾನರ್ಜಿ ಸಹಾಯವಿಲ್ಲದೇ ಕಾಂಗ್ರೆಸ್ ಹೆಚ್ಚಿನ ಸೀಟು ಗೆಲ್ಲುವುದು ಕಷ್ಟ.
ಇನ್ನು ಮಹಿಳೆಯರ ಪರ ಎನ್ನುವ ಕಾಂಗ್ರೆಸ್ ಈ ಬಾರಿ ಮಹಿಳಾ ಅಭ್ಯರ್ಥಿಯನ್ನೇ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿದರೆ ಹೆಚ್ಚಿನ ಸೀಟು ಗೆಲ್ಲಬಹುದು. ಆದರೆ ಕಾಂಗ್ರೆಸ್ ನಲ್ಲಿ ಮಹಿಳಾ ಅಭ್ಯರ್ಥಿಗಳಿಲ್ಲ. ಹೀಗಾಗಿ ಮಮತಾ ಅಥವಾ ಮಾಯಾವತಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿ ಹೆಚ್ಚಿನ ಓಟು ಗೆಲ್ಲುವುದು ಕಾಂಗ್ರೆಸ್ ಲೆಕ್ಕಾಚಾರ. ಮಾಯಾವತಿಗೆ ಕರ್ನಾಟಕದಲ್ಲಿ ಜೆಡಿಎಸ್, ಆಂಧ್ರಪ್ರದೇಶದಲ್ಲಿ ಟಿಡಿಪಿ ಬೆಂಬಲ ಸಿಗಬಹುದು. ಇದೆಲ್ಲಾ ಲೆಕ್ಕಾಚಾರ ಹಾಕಿಯೇ ರಾಹುಲ್ ಪ್ರಧಾನಿ ಕುರ್ಚಿಯ ರೇಸ್ ನಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.