Publish Date: Thu, 26 Jul 2018 (09:08 IST)
Updated Date: Thu, 26 Jul 2018 (09:10 IST)
ನವದೆಹಲಿ: ಅವಿಶ್ವಾಸ ಗೊತ್ತುವಳಿ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ಮೋದಿಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಭಾಷಣದ ನಡುವೆ ಹೋಗಿ ತಬ್ಬಿಕೊಂಡಿದ್ದು ಭಾರೀ ಸುದ್ದಿಯಾಗಿತ್ತು.
ಅಷ್ಟಕ್ಕೂ ರಾಹುಲ್ ಈ ರೀತಿ ಆಕಸ್ಮಿಕವಾಗಿ ಮಾಡಿದರು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಈ ರೀತಿ ಮಾಡಲು ರಾಹುಲ್ ಕೆಲವು ತಿಂಗಳುಗಳ ಮೊದಲೇ ಯೋಜನೆ ರೂಪಿಸಿದ್ದರಂತೆ. ಆ ರೀತಿ ಆಂಗ್ಲ ಮಾಧ್ಯಮ ವರದಿಯೊಂದು ಹೇಳಿದೆ.
ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಯಾವತ್ತೂ ನೆಹರೂವಿನಿಂದ ಹಿಡಿದು, ಸೋನಿಯಾ ಗಾಂಧಿಯವರೆಗೆ ಟೀಕೆ ಮಾಡುತ್ತಿದ್ದರು. ಹೀಗಾಗಿ ಮೋದಿಗೆ ಅಪ್ಪುಗೆಯ ಉತ್ತರ ನೀಡಲು ರಾಹುಲ್ ಹಲವು ದಿನಗಳಿಂದ ಯೋಚಿಸುತ್ತಿದ್ದರು. ಅದನ್ನು ಅವಿಶ್ವಾಸ ಗೊತ್ತುವಳಿ ಚರ್ಚೆಯ ಸಂದರ್ಭದಲ್ಲಿ ಮಾಡಿದರು ಎಂದು ರಾಹುಲ್ ಗಾಂಧಿ ಆಪ್ತರ ಹೇಳಿಕೆಯನ್ನು ಉಲ್ಲೇಖಿಸಿ ಆಂಗ್ಲ ಮಾಧ್ಯಮ ವರದಿ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.