Select Your Language

Notifications

webdunia
webdunia
webdunia
webdunia

ಅಪಘಾತಕ್ಕೀಡಾದ ನಟ ಪುನೀತ್ ರಾಜ್ ಕುಮಾರ್ ಕಾರು

ಪುನೀತ್ ರಾಜ್ ಕುಮಾರ್
ಬೆಂಗಳೂರು , ಶುಕ್ರವಾರ, 8 ಜೂನ್ 2018 (09:32 IST)
ಬೆಂಗಳೂರು: ಸ್ಯಾಂಡಲ್ ವುಡ್ ದೊಡ್ಮನೆ ಹುಡುಗ ನಟ, ಪುನೀತ್ ರಾಜ್ ಕುಮಾರ್ ಚಲಿಸುತ್ತಿದ್ದ ಕಾರು ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆ ಬಳಿ ಅಪಘಾತಕ್ಕೀಡಾಗಿದೆ.

ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಸುದ್ದಿ ತಿಳಿದ ತಕ್ಷಣ ಅವರ ಮನೆ ಬಳಿ ಅಭಿಮಾನಿಗಳ ದಂಡೇ ಮೆರೆದಿತ್ತು. ತಮ್ಮ ಮೆಚ್ಚಿನ ನಟನಿಗೆ ಏನಾಯಿತೋ ಎಂಬ ಆತಂಕದಿಂದ ಅಭಿಮಾನಿಗಳು ಮನೆವರೆಗೆ ಬಂದಿದ್ದಲ್ಲದೆ, ಸಾಮಾಜಿಕ ಜಾಲತಾಣದಲ್ಲೂ  ಆತಂಕ ವ್ಯಕ್ತಪಡಿಸುತ್ತಿದ್ದರು.

ಆದರೆ ಕಾರಿಗೆ ಸ್ವಲ್ಪ ಪೆಟ್ಟಾಗಿರುವುದಲ್ಲದೆ, ಕಾರಿನಲ್ಲಿದ್ದ ನಮಗೆ ಯಾರಿಗೂ ಏನೂ ಆಗಿಲ್ಲ ಎಂದು ಸ್ವತಃ ಪುನೀತ್ ಮಾಧ್ಯಮಗಳ ಮೂಲಕ ಅಭಿಮಾನಿಗಳಿಗೆ ಹೇಳಿಕೆ ನೀಡಿದರು. ಅಲ್ಲದೆ, ಅಪಘಾತವಾದಾಗ ಸ್ಥಳೀಯರು ತಮಗೆ ಸಹಾಯ ಮಾಡಿದರು. ನಾವೆಲ್ಲರೂ ಚೆನ್ನಾಗಿಯೇ ಇದ್ದೇವೆ. ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ. ನನ್ನ ಮೇಲಿನ ಕಳಕಳಿಗೆ ಧನ್ಯವಾದಗಳು ಎಂದು ಪುನೀತ್ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಧಿಕಾರ ಕಳೆದುಕೊಂಡ ಮೇಲೆ ಸಿದ್ದರಾಮಯ್ಯ ಬೇಡವಾದ್ರು!