Publish Date: Fri, 08 Jun 2018 (09:24 IST)
Updated Date: Fri, 08 Jun 2018 (09:25 IST)
ಬೆಂಗಳೂರು: ಅಧಿಕಾರವಿದ್ದರೇನೇ ಮನುಷ್ಯನಿಗೆ ಬೆಲೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಚಾರದಲ್ಲಿ ಸ್ಪಷ್ಟವಾಗಿದೆ. ಬಾದಾಮಿಗೆ ಭೇಟಿ ನೀಡಿದ್ದ ಸಿದ್ದರಾಮಯ್ಯಗೆ ಸ್ವಾಗತ ಕೋರಲು ಯಾವೊಬ್ಬ ನಾಯಕರೂ ಇರಲಿಲ್ಲ.
ಚುನಾವಣೆ ಫಲಿತಾಂಶದ ಬಳಿಕ ತಮ್ಮನ್ನು ಗೆಲ್ಲಿಸಿದ ಬಾದಾಮಿ ಜನತೆಗೆ ಕೃತಜ್ಞತೆ ವ್ಯಕ್ತಪಡಿಸಲು ಸಿದ್ದರಾಮಯ್ಯ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಆದರೆ ಸಿಎಂ ಆಗಿದ್ದಾಗ ತಮ್ಮ ಹಿಂದೆ ಮುಂದೆ ಸುತ್ತುತ್ತಿದ್ದ ಸ್ಥಳೀಯ ನಾಯಕರು ಈಗ ಮಾಜಿ ಆದ ಮೇಲೆ ಒಬ್ಬರೂ ಪತ್ತೆಯಿರಲಿಲ್ಲ!
ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಮಾತ್ರ ಅನೌಪಚಾರಿಕವಾಗಿ ಹೂಗುಚ್ಛ ನೀಡಿ ಸ್ವಾಗತಿಸಿದರು. ಅವರನ್ನು ಬಿಟ್ಟರೆ ವಾಯವ್ಯ ಸಾರಿಗೆ ಸಂಸ್ಥೆ ಮಾಜಿ ಮುಖ್ಯಸ್ಥ ಸದಾನಂದ ಡಂಗನವರ ಹೊರಗಡೆ ನಿಂತು ಹೋಗುವಾಗ ಶುಭ ಕೋರಿ ಕಳುಹಿಸಿಕೊಟ್ಟರು. ಅಂತೂ ಅಧಿಕಾರವಿಲ್ಲದ ಮೇಲೆ ಯಾರಿಗೂ ಬೇಡವಾದರು ಸಿದ್ದರಾಮಯ್ಯ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.