Select Your Language

Notifications

webdunia
webdunia
webdunia
webdunia

ಸೇಡು ತೀರಿಸಿಕೊಂಡರಾ ಜಿ ಪರಮೇಶ್ವರ್? ಕಾಂಗ್ರೆಸ್ ವಲಯದಲ್ಲಿ ಕೇಳಿಬಂದಿದೆ ಗುಸು ಗುಸು!

ಸೇಡು ತೀರಿಸಿಕೊಂಡರಾ ಜಿ ಪರಮೇಶ್ವರ್? ಕಾಂಗ್ರೆಸ್ ವಲಯದಲ್ಲಿ ಕೇಳಿಬಂದಿದೆ ಗುಸು ಗುಸು!
ಬೆಂಗಳೂರು , ಶುಕ್ರವಾರ, 8 ಜೂನ್ 2018 (09:20 IST)
ಬೆಂಗಳೂರು: ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯನವರಿಂದಾಗಿ ತಮಗೆ ಬೇಕಾದ ಸ್ಥಾನ ಸಿಗಲಿಲ್ಲವೆಂದು ಈಗ ತಮಗೆ ಅಧಿಕಾರ ಸಿಕ್ಕಾಗ ಜಿ ಪರಮೇಶ್ವರ್ ಸೇಡು ತೀರಿಸಿಕೊಂಡರಾ?

ಹಾಗಂತ ಕಾಂಗ್ರೆಸ್ ವಲಯದಲ್ಲಿ ಗುಸು ಗುಸು ಕೇಳಿಬಂದಿದೆ. ಸಿದ್ದರಾಮಯ್ಯ ಪರವಾಗಿ ಮಾತನಾಡಿದವರು, ಅವರ ಆತ್ಮೀಯರನ್ನು ಈ ಸರ್ಕಾರದಲ್ಲಿ ಯಾವುದೇ ಹುದ್ದೆ ಕೊಡದೇ ಪರಮೇಶ್ವರ್ ಅಂದು ತಮಗಾದ ಅವಮಾನಕ್ಕೆ ಸೇಡು ತೀರಿಸಿಕೊಂಡರು ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಪರಮೇಶ್ವರ್ ಬಗ್ಗೆ ಹಲವು ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ‘ಸಚಿವ ಸಂಪುಟ ವಿಸ್ತರಣೆ ನನ್ನೊಬ್ಬನ ತೀರ್ಮಾನದಿಂದ ನಡೆದಿದ್ದಲ್ಲ. ನಾನು ಯಾರಿಗೂ ಸಚಿವಗಿರಿ ತಪ್ಪಿಸಿಲ್ಲ. ಎಲ್ಲವೂ ಹೈಕಮಾಂಡ್ ನಿರ್ಧಾರ. ಇದರಲ್ಲಿ ಯಾವುದೇ ದುರುದ್ದೇಶ ಅಥವಾ ವೈಯಕ್ತಿಕ ಸೇಡು ಇಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಣಬ್ ಮುಖರ್ಜಿ ಮೇಲಿನ ಸೋನಿಯಾ ಗಾಂಧಿ ಸಿಟ್ಟು ಟ್ವಿಟರ್ ನಲ್ಲಿ ಬಹಿರಂಗವಾಯ್ತು!