Publish Date: Wed, 09 May 2018 (13:23 IST)
Updated Date: Wed, 09 May 2018 (13:24 IST)
ನಾಯಕನೂರಿನಲ್ಲಿ ದಲಿತರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದ್ದು ಲೋಕಸಭೆ ಮಾಜಿ ಸ್ಪೀಕರ್ ಮೀರಾಕುಮಾರಿಗೆ ವಿನಯ ಕುಲಕರ್ಣಿ ಕುರಿತು ಪರಿಚಯವಿದ್ದರೆ ಅವರು ಕ್ಷೇತ್ರಕ್ಕೆ ಬರುತ್ತಿರಲಿಲ್ಲ ಎಂದು ಬಿಜೆಪಿ ಮುಖಂಡ ಪ್ರಹ್ಲಾದ್ ಜೋಷಿ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನವರೇ ಸಜ್ಜನ ರಾಜಕಾರಿಗಳನ್ನು ಸರಿಯಾಗಿ ನಡೆಸಿಕೊಂಡಿಲ್ಲ ಅಂತಾ ಧಾರವಾಡ ಉಪ್ಪಿನ ಬೆಟಗೇರಿಯಲ್ಲಿ ಕಾಂಗ್ರೆಸ್ ನ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
ನಿಜಲಿಂಗಪ್ಪ , ವೀರೇಂದ್ರ ಪಾಟೀಲ್ ಸೇರಿದಂತೆ ಅನೇಕರನ್ನು ಕಾಂಗ್ರೆಸ್ ಪಕ್ಷದಲ್ಲಿ ತುಳಿಯಲಾಗಿದೆ. ಇನ್ನೊಂದಡೆ ಒಗ್ಗಟ್ಟಾಗಿದ್ದ ಬಹುದೊಡ್ಡ ಸಮಾಜವನ್ನು ಒಡೆಯಲು ವಿನಯ ಕುಲಕರ್ಣಿ ಮುಂಚೂಣಿಯಲ್ಲಿದ್ದಾರೆ.
ಆದ್ರೆ ಧರ್ಮ ಒಡೆಯಲು ಮುಖ್ಯ ಕಾರಣ ಯಡಿಯೂರಪ್ಪನವರ ಭಯವಿದೆ. ಇದೆ ಉದ್ದೇಶ ಇಟ್ಟುಕೊಂಡು ಯಡಿಯೂರಪ್ಪನವರನ್ನ ಸಿಎಂ ಆಗದಂತೆ ತಡೆಯಲು ಧರ್ಮ ಒಡೆಯಲಾಗಿದೆ ಎಂದು ಬಿಜೆಪಿ ಮುಖಂಡ ಪ್ರಹ್ಲಾದ್ ಜೋಷಿ ಆರೋಪಿಸಿದರು.