Select Your Language

Notifications

webdunia
webdunia
webdunia
webdunia

ರಾಜ್ಯದ ಎಷ್ಟು ಮಂದಿ ಪೊಲೀಸರಿಗೆ ರಾಷ್ಟ್ರಪತಿ ಪದಕ

ರಾಜ್ಯದ ಎಷ್ಟು ಮಂದಿ ಪೊಲೀಸರಿಗೆ ರಾಷ್ಟ್ರಪತಿ ಪದಕ
ಬೆಂಗಳೂರು , ಮಂಗಳವಾರ, 25 ಜನವರಿ 2022 (17:14 IST)
ಬೆಂಗಳೂರು :  ಪ್ರತಿ ವರ್ಷ ಗಣರಾಜ್ಯೋತ್ಸವ ಸಂದರ್ಭದಲ್ಲಿ ನೀಡಲಾಗುವಂತೆ  ಪೊಲೀಸ್ ಪದಕ ಹಾಗೂ ರಾಷ್ಟ್ರಪತಿ ಪದಕಗಳನ್ನು ಘೋಷಣೆ ಮಾಡಲಾಗಿದೆ.

ಈ ಬಾರಿ ಕರ್ನಾಟಕ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಹಾಗೂ 19 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸೇವಾ ಕಾರ್ಯಕ್ಕೆ ಮೆಚ್ಚಿ ಪೊಲೀಸ್ ಪದಕ ಸಿಕ್ಕಿದೆ. ದೇಶದ ವಿವಿಧ ರಾಜ್ಯಗಳ ಪೊಲೀಸ್ ಸಿಬ್ಬಂದಿ ಪದಕಗಳನ್ನು ಪಡೆದಿದ್ದು, ಈ ಸಂಬಂಧ ಪದಕ ವಿಜೇತರ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ.

ಈ ಬಾರಿ 2022ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ನೀಡಲಾಗುವಂತೆ ಶೌರ್ಯಕ್ಕಾಗಿ ನೀಡಲಾಗುವಂತ ಪೊಲೀಸ್ ಪದಕವನ್ನು189 ಪೊಲೀಸರಿಗೆ, ರಾಷ್ಟ್ರಪತಿ ಪೊಲೀಸ್ ಪದಕವನ್ನು 88 ಮಂದಿಗೆ ಹಾಗೂ ಉತ್ತಮ ಸೇವೆಗಾಗಿ ನೀಡುವಂತ ಪೊಲೀಸ್ ಪದಕವನ್ನು 662 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳಿಗೆ ನೀಡಲಾಗಿದೆ.

ಬನ್ನಿಕಲ್ ದಯಾನಂದ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ರಾಜ್ಯ ಗುಪ್ತಚರ ಇಲಾಖೆ ಹಾಗೂ ಹಿತೇಂದ್ರ ಆರ್, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಕ್ರೈಂ ಹಾಗೂ ಟೆಕ್ನಿಕಲ್ ಸರ್ವಿಸ್, ಇವರಿಗೆ ರಾಷ್ಟ್ರಪತಿ ಪದಕ ಸಿಕ್ಕಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯ ಕಾಪಾಡುವುದು ಅಗತ್ಯ