Publish Date: Tue, 25 Jan 2022 (15:02 IST)
Updated Date: Tue, 25 Jan 2022 (19:04 IST)
ಏನೇ ಆದರೂ ಸೋಷಿಯಲ್ ಮೀಡಿಯಾದಲ್ಲಿ ಜನರು ಬಹಿರಂಗವಾಗಿ ಪ್ರಶ್ನಿಸಿ ಬಿಡುತ್ತಾರೆ. ಅಂಥದ್ದೇ ಸನ್ನಿವೇಶ ಇದೀಗ ಬೆಂಗಳೂರು ಸಂಚಾರ ಪೊಲೀಸರ ವಿಷಯದಲ್ಲೂ ಆಗಿದೆ.
ಬೆಂಗಳೂರು ಸಂಚಾರ ಪೊಲೀಸರು ಬೈಕ್ ಸವಾರರು ಧರಿಸಿದ್ದ ಗುಣಮಟ್ಟದ್ದಲ್ಲದ ಹೆಲ್ಮೆಟ್ಗಳನ್ನು ವಶಕ್ಕೆ ಪಡೆದಿದ್ದಾರೆ
ಹೆಲ್ಮೆಟ್ಗಳನ್ನು ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆ ಪೊಲೀಸರು ರಸ್ತೆಯಲ್ಲಿ ಸಾಲಾಗಿ ಜೋಡಿಸಿಟ್ಟು, ಅದರ ಮೇಲೆ ಕಾಂಕ್ರೀಟ್ ಮಿಕ್ಸರ್ ಲಾರಿಯೊಂದು ಸಾಗುವಂತೆ ಮಾಡಿ ಶಗೊಳಿಸಿದ್ದಾರೆ.
ಪೊಲೀಸರ ಈ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅಷ್ಟಕ್ಕೂ ನಿಮಗೆ ಸವಾರರ ಕುರಿತು ಅಷ್ಟು ಕಾಳಜಿ ಇದ್ದರೆ ಮೊದಲು ಇಂಥ ಹೆಲ್ಮೆಟ್ಗಳ ಉತ್ಪಾದನೆ ಹಾಗೂ ಮಾರಾಟ ಆಗದಂತೆ ನೋಡಿಕೊಳ್ಳಿ. ಗುಣಮಟ್ಟದ ರಸ್ತೆ ಒದಗಿಸಿ, ರಸ್ತೆ ಗುಂಡಿ ಮುಚ್ಚಿಸಿ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.