ದೇಶದಲ್ಲಿ ಮುಂದಿನ 14 ದಿನಗಳಲ್ಲಿ ಕೋವಿಡ್ ಮೂರನೇ ಅಲೆ ಉತ್ತುಂಗಕ್ಕೆ ಏರಲಿದೆ ಎಂದು ಮದ್ರಾಸ್ ಐಐಟಿಯ ವರದಿ ತಿಳಿಸಿದೆ.
ಕೊರೋನಾ ಸೋಂಕು ಹರಡುವ ಪ್ರಮಾಣವನ್ನು ಸೂಚಿಸುವ ಭಾರತದ ಆರ್-ಮೌಲ್ಯ ಕಳೆದ ವಾರ 1.57ಕ್ಕೆ ಇಳಿದಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಇದು 1ಕ್ಕಿಂತ ಕಡಿಮೆಯಾದರೆ ಸಾಂಕ್ರಾಮಿಕ ರೋಗ ಕೊನೆಯಾಗುತ್ತದೆ ಎಂದು ವರದಿ ಹೇಳಿದೆ.
ಈ ಹಿಂದೆ ಜ.1ರಿಂದ 6ರ ನಡುವಿನದಲ್ಲಿ ಆರ್ ಮೌಲ್ಯ 4ರಷ್ಟಿತ್ತು, ನಂತರ ಜ.7-14ರ ವೇಳೆಗೆ 2.2ಕ್ಕೆ ಇಳಿದಿತ್ತು. ಈಗ ಜ.14-21ರ ನಡುವೆ ಇದರ ಪ್ರಮಾಣ 1.57 ದಾಖಲಾಗಿದೆ. ಹೀಗೆ ಸೋಂಕಿನ ಪ್ರಮಾಣ 1ಕ್ಕೆ ಇಳಿದರೆ ರೋಗ ಕೊನೆಗೊಳ್ಳುತ್ತದೆ ಎಂದು ಪರಿಗಣಿಸಲಾಗಿದೆ.
ಈಗಾಗಲೇ ಕೊಲ್ಕತ್ತಾದಲ್ಲಿ ಮೂರನೇ ಅಲೆ ಉತ್ತುಂಗ ಮುಗಿದಿದ್ದು, ದೆಹಲಿ, ಚೆನ್ನೈ ರಾಜ್ಯಗಳಲ್ಲಿ ಶೀಘ್ರದಲ್ಲಿ ಮೂರನೇ ಅಲೆ ಮುಗಿಯಲಿದೆ. ಫೆ.6ರ ವೇಳೆಗೆ ಅಂದರೆ ಮುಂದಿನ 14 ದಿನಗಳಲ್ಲಿ ಭಾರತದಲ್ಲಿ ಕೊರೋನಾ ಸೋಂಕು ಉತ್ತುಂಗಕ್ಕೆ ಏರುವ ಸಾಧ್ಯೆ ಇದೆ ಎಂದು ತಿಳಿಸಿದೆ.
ಈ ಹಿಂದೆ ಫೆ.15ರ ನಡುವೆ ಸೋಂಕು ಉತ್ತುಂಗಕ್ಕೆ ಏರುವ ಸಾಧ್ಯತೆ ಇದೆ ಎನ್ನಲಾಗಿತ್ತು.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!