Publish Date: Tue, 25 Jan 2022 (15:23 IST)
Updated Date: Tue, 25 Jan 2022 (19:28 IST)
2022 ರ ಗಣರಾಜ್ಯೋತ್ಸವದ ಮುನ್ನಾದಿನದಂದು 939 ಪೊಲೀಸ್ ಪದಕಗಳನ್ನು ಘೋಷಿಸಿದ್ದು, ಇದರಲ್ಲಿ ಶೌರ್ಯಕ್ಕಾಗಿ 189 ಪದಕಗಳು ಸೇರಿವೆ.
ಗೃಹ ವ್ಯವಹಾರಗಳ ಸಚಿವಾಲಯವು ಜನವರಿ 25 ರ ಮಂಗಳವಾರದಂದು ಈ ಕುರಿತು ಪ್ರಕಟಣೆ ಹೊರಡಿಸಿದೆ. ಮಂಗಳವಾರದ ಗೃಹ ಸಚಿವಾಲಯದ ಪ್ರಕಟಣೆಯ ಪ್ರಕಾರ, 939 ಪದಕಗಳಲ್ಲಿ 189 ಶೌರ್ಯಕ್ಕಾಗಿ ಪೊಲೀಸ್ ಪದಕ (ಪಿಎಂಜಿ), 88 ವಿಶಿಷ್ಟ ಸೇವೆ (ಪಿಪಿಎಂ) ಮತ್ತು 662 ಮೆರಿಟೋರಿಯಸ್ ಸೇವೆಗಳಿಗೆ (ಪಿಎಂ) ನೀಡಲಾಗಿದೆ.
ಗಣರಾಜ್ಯೋತ್ಸವದ ಮೊದಲು ಘೋಷಿಸಲಾದ ಒಟ್ಟು ಶೌರ್ಯ ಪದಕಗಳ ಪೈಕಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಅತ್ಯಧಿಕ ಪದಕ ಪಡೆದುಕೊಂಡಿದ್ದಾರೆ. ಅವರ ಧೈರ್ಯ ಮತ್ತು ಶೌರ್ಯಕ್ಕಾಗಿ ಒಟ್ಟು 189 ರಲ್ಲಿ 115 ಪೊಲೀಸ್ ಪದಕಗಳನ್ನು ನೀಡಲಾಗಿದೆ.
ಸಿಆರ್‌ಪಿಎಫ್ ವಿಶೇಷ ಸೇವೆಗಾಗಿ ಐದು ರಾಷ್ಟ್ರಪತಿ ಪೊಲೀಸ್ ಪದಕ ಮತ್ತು ಪ್ರತಿಭಾನ್ವಿತ ಸೇವೆಗಾಗಿ 57 ಪೊಲೀಸ್ ಪದಕಗಳನ್ನು ಸ್ವೀಕರಿಸಲಿದೆ.