Webdunia - Bharat's app for daily news and videos

Install App

ಪ್ರಧಾನಿ ಮೋದಿ ವಿರುದ್ಧ ನಟ ಪ್ರಕಾಶ್ ರೈ ಹಿಗ್ಗಾಮುಗ್ಗಾ ವಾಗ್ದಾಳಿ

Webdunia
ಬುಧವಾರ, 2 ಮೇ 2018 (15:44 IST)
ಪ್ರಧಾನಿಗಳೇ 2019 ರ ನಂತರ ನೀವು ನಿರುದ್ಯೋಗಗಳಾಗಲಿದ್ದೀರಿ, ಕರ್ನಾಟಕಕ್ಕೆ ಬನ್ನಿ ವಯಸ್ಕರ ಶಿಕ್ಷಣ ಪಡೆಯಿರಿ, ಈಗ ನಿಮಗೆ ಅಂಬೇಡ್ಕರ್ ಅವರು ನೆನಪಾಗುತ್ತಿದ್ದಾರೆ ನಿಮ್ಮದೇ ಪಕ್ಷದ 4 ಜನ ದಲಿತ ಸಂಸದರು ಕೆಲಸ ಮಾಡರಾಗುತ್ತಿಲ್ಲ ಎಂದು ಹಿರಿಯ ನಟ ಪ್ರಕಾಶ್ ರೈ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ಉದ್ಯೋಗ ಕೊಡುತ್ತೇನೆ ಎಂದ ಪ್ರಧಾನಿ ಉತ್ತರ ಕೊಡಲಿ, ನಾನು ಎಲ್ಲರಿಗೂ ಪ್ರಶ್ನೆ ಕೇಳುತ್ತೇನೆ. ನಾನು ಕೆಲವರಿಗೆ ಕಾಮಿಡಿ ಪೀಸ್ ತರ ಕಂಡರೆ ಅದು ಅವರ ಅಭಿಪ್ರಾಯ ನನಗೆ ಪ್ರಧಾನಿಗಳು ಕಾಮಿಡಿ ಪೀಸ್ ಥರ ಕಾಣುತ್ತಾ ಕಪ್ಪು ಹಣ ತರ್ಲಿಲ್ಲ, ಎಟಿಎಂಗಳಲ್ಲಿ ಇದುವರೆಗೆ ಜನರಿಗೆ ಹಣ ಸಿಗ್ತಿಲ್ಲವೇಕೇ? ಉತ್ತರ ಕೊಡುವಿರಾ ಮೋದಿಯವರೇ ಎಂದು ವ್ಯಂಗ್ಯವಾಡಿದ್ದಾರೆ.
 
ಬಿಜೆಪಿ ಅಲ್ಲದವರ ಮೇಲೆ ಐಟಿ ರೇಡ್ ಮಾಡ್ತಿರಾ?ಬಿಜೆಪಿ ಕರ್ನಾಟಕದಲ್ಲಿ ಗೆದ್ದರೆ ರಾಜ್ಯಕ್ಕೆ ಉಳಿಗಾಲವಿಲ್ಲಈ ಹಿಂದೆ ರಾಜ್ಯ ಆಳ್ವಿಕೆ ಮಾಡಿದಾಗ ೩ ಜನ ಸಿಎಂ ಮಾಡಿಕೊಂಡು ತೀಟೆ ತಿರಿಸಿಕೊಂಡಿದ್ದಿರಿ ಎನ್ನುವುದು ಮರೆತುಹೋಗಿದೆಯಾ ಮೋದಿಯವರೇ ಎಂದು ಲೇವಡಿ ಮಾಡಿದ್ದಾರೆ.
 
ಪಿಎಂ ಜನರ ಹಣದಲ್ಲಿ ಫಾರೀನ್ ಟೂರ್ ಹೋಗ್ತಾರೆ ಬಿಜೆಪಿಯವರು ನನ್ನ ಹೆಂಡ್ತಿ ಬಗ್ಗೆ, ನನ್ನ ಸತ್ತ ಮಗನ ಬಗ್ಗೆ, ನನ್ನ ಜಾತಿ ಬಗ್ಗೆ ಮಾತಾಡಿದ್ದಾರೆ
ನನಗೆ ನೋವಿದೆ, ಹಾಗಾಗಿ ನಾನು ಮಾತಾಡ್ತಿದಿನಿ. ಭಾರತದ ಯಾವ ಪಕ್ಷವನ್ನು ನಂಬದ ಸ್ಥಿತಿ ಇದೆ- ನನಗೆ ಏನು ಅನಿಸುತ್ತದೆ ಅದನ್ನು ಕೇಳ್ತಿನಿ ಎಂದು ವಾಕ್‌ಪ್ರಹಾರ ನಡೆಸಿದ್ದಾರೆ.
 
ಭಾರತವನ್ನು ಮತೀಯತೆಯಿಂದ ಕಾಪಾಡಬೇಕಿದೆ. ಕೋಮುವಾದದಿಂದ ಕಾಪಾಡಬೇಕಿದೆ. ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ ಬಿಜೆಪಿಯವರುಜಿಎಸ್ಟಿ ಯಿಂದ ದೇಶವನ್ನು ಕೊಳ್ಳೆ ಹೊಡೆದಿದ್ದಿರಿ. ಡಿಮಾನಿಟೈಜೇಷನ್ ಇಂದು ಎಷ್ಟು ಜನ ಕೆಲಸ ಕಳೆದುಕೊಂಡಿದ್ದಾರೆ. ಲೂಟಿ ಮಾಡಿದ ರೆಡ್ಡಿ ಬ್ರದರ್ಸ್ ನಿಮ್ಮ ಜತೆ ಇದ್ದಾರೆನಿಮಗ್ಯಾವ ನೈತಿಕತೆ ಇದೆ ನನ್ನ ಪ್ರಶ್ನೆಗೆ ಉತ್ತರ ಕೋಡಿ, ಸಾಮಾಜಿಕ ಜಾಲತಣದಲ್ಲಿ ಪ್ರಶ್ನೆ ಕೇಳಿದರೆ ನಟ ನೇ ಅಲ್ಲ ಅಂತೀರಾ?
 
ಕಾಂಗ್ರೆಸ್ 10% ಸರಕಾರ ಅಂತಿರಾ ಪ್ರೋವ್ ಮಾಡಿ ನೋಡೋಣ ಎಂದು ಹಿರಿಯ ನಟ ಪ್ರಕಾಶ್ ರೈ ತಿರುಗೇಟು ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut Price: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price: ಚಿನ್ನ, ಬೆಳ್ಳಿ ಬೆಲೆ ಇಂದು ಶಾಕ್ ಆಗುವಂತಿದೆ

ಅವಧಿಗೂ ಮುನ್ನ ರಾಜೀನಾಮೆ ನೀಡಿದ ಉಪರಾಷ್ಟ್ರಪತಿಗಳು ಯಾರೆಲ್ಲಾ ಇಲ್ಲಿದೆ ಲಿಸ್ಟ್

ಹೆಣ್ಣು ಮಕ್ಕಳು ಬೇಗ ಮುಟ್ಟಾಗುತ್ತಿರುವುದು ಯಾಕೆ: ಖ್ಯಾತ ವೈದ್ಯೆ ಪದ್ಮಿನಿ ಪ್ರಸಾದ್ ಟಿಪ್ಸ್

ಇಂದಿನಿಂದ ಮೂರು ದಿನ ಯಾರ ಕೈಗೂ ಸಿಗಲ್ಲ ಡಿಕೆ ಶಿವಕುಮಾರ್

ಮುಂದಿನ ಸುದ್ದಿ
Show comments